ಸಂವಿಧಾನದಿಂದ ಜಾತ್ಯತೀತತೆ, ಸಾಮಾಜವಾದ ಕೈಬಿಡಲು ಬಿಜೆಪಿ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ | PC : apcc.assam.org
ಭುವನೇಶ್ವರ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದಿಂದ ಜಾತ್ಯಾತೀತತೆ ಹಾಗೂ ಸಮಾಜವಾದವನ್ನು ಕೈಬಿಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
ಇಲ್ಲಿ ಪಕ್ಷದ ‘‘ಸಂವಿಧಾನ ಬಚಾವೊ ಸಮಾವೇಶ’’ದಲ್ಲಿ ಮಾತನಾಡಿದ ಅವರು, ದೇಶದ ದಲಿತರು, ಬುಡಕಟ್ಟು ಜನರು ಹಾಗೂ ಯುವಕರು ಬಿಜೆಪಿ ಆಡಳಿತದ ಅಡಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕಲಿಯಲೇಬೇಕು ಎಂದಿದ್ದಾರೆ.
ಒಡಿಶಾದಲ್ಲಿ ಬಿಜೆಪಿ ಬೆಂಬಲಿಗರು ದಲಿತರು ಹಾಗೂ ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಖರ್ಗೆ ಅವರು ಪ್ರತಿಪಾದಿಸಿದರು.
ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್ ಸರಕಾರ ದೇಶದಲ್ಲಿ 160 ಸಾರ್ವಜನಿಕ ವಲಯದ ಕಂಪೆನಿಗಳನ್ನು ಸ್ಥಾಪಿಸಿದೆ. ಆದರೆ, ಬಿಜೆಪಿ ಅದರಲ್ಲಿ 23ನ್ನು ಖಾಸಗೀಕರಣಗೊಳಿಸಿದೆ ಎಂದರು.
Next Story





