ಮಲ್ಯ, ನೀರವ್ ಗಡಿಪಾರು; ಬ್ರಿಟನ್ಗೆ ಶೀಘ್ರ ತನಿಖಾ ತಂಡ

Photo: PTI
ಹೊಸದಿಲ್ಲಿ : ರಕ್ಷಣಾ ವ್ಯಾಪಾರಿ ಸಂಜಯ್ ಭಂಡಾರಿ, ವಜ್ರೋದ್ಯಮಿ ನೀರವ್ ಮೋದಿ ಹಾಗೂ ಕಿಂಗ್ಫಿಶರ್ ವಿಮಾನ ಯಾನ ಸಂಸ್ಥೆಯ ಪ್ರವರ್ತಕ ವಿಜಯ್ ಮಲ್ಯ ಸೇರಿದಂತೆ ದೇಶದಿಂದ ಪರಾರಿಯಾಗಿರುವ ವಂಚಕರನ್ನು ದೇಶಕ್ಕೆ ಕರೆದುಕೊಂಡು ಬರಲು ಎನ್ಐಎ, ಇ.ಡಿ. ಹಾಗೂ ಸಿಬಿಐ ಸೇರಿದಂತೆ ದೇಶದ ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಬ್ರಿಟನ್ಗೆ ತೆರಳಲು ಚಿಂತಿಸುತ್ತಿದ್ದಾರೆ.
ಪರಸ್ಪರ ಕಾನೂನು ನೆರವು ಒಪ್ಪಂದ (ಎಂಎಲ್ಎಟಿ) ದ ಅಡಿಯಲ್ಲಿ ಬ್ರಿಟನ್ ಅಧಿಕಾರಿಗಳೊಂದಿಗೆ ದೀರ್ಘ ಕಾಲದಿಂದ ಬಾಕಿ ಇರುವ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ತನಿಖಾ ತಂಡ ದ್ವಿಪಕ್ಷೀಯ ಚರ್ಚೆಯನ್ನು ಆಯೋಜಿಸಲಿದೆ.
ಭಾರತ ಹಾಗೂ ಬ್ರಿಟನ್ ಎರಡು ದೇಶಗಳು ಎಂಎಲ್ಎಟಿಗೆ ಸಹಿ ಹಾಕಿರುವುದರಿಂದ ಆರ್ಥಿಕ ಅಪರಾಧಿಗಳು, ಇತರರು ಒಳಗೊಂಡಿರುವ ಅಪರಾಧಗಳ ತನಿಖೆಗಳ ಕುರಿತ ಮಾಹಿತಿಯನ್ನು ಕಾನೂನುಬದ್ಧವಾಗಿ ಹಂಚಿಕೊಳ್ಳಲು ಬದ್ಧರಾಗಿದ್ದಾರೆ.
Next Story





