ಕೇಂದ್ರ ಬಜೆಟ್ 2026 | ಜನ ವಿರೋಧಿ ಬಜೆಟ್: ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ (File Photo: PTI)
ಹೊಸದಿಲ್ಲಿ, ಫೆ. 1: 2026-27ನೇ ಸಾಲಿನ ಬಜೆಟ್ ಅನ್ನು ದಿಕ್ಕುರಹಿತ ಹಾಗೂ ಮುನ್ನೋಟವಿಲ್ಲದ ಬಜೆಟ್ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ವಿವರಿಸಿದ್ದಾರೆ.
ಈ ಬಜೆಟ್ ಸಾಮಾನ್ಯ ಜನರಿಗೆ ಹಾಗೂ ತನ್ನ ರಾಜ್ಯಕ್ಕೆ ಏನನ್ನೂ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
‘‘ಇದು ದಿಕ್ಕುರಹಿತ, ಮುನ್ನೋಟವಿಲ್ಲದ, ಕ್ರಿಯಾಶೀಲವಲ್ಲದ ಹಾಗೂ ಜನ ವಿರೋಧಿ ಬಜೆಟ್. ಇದು ಮಹಿಳಾ ವಿರೋಧಿ, ರೈತ ವಿರೋಧಿ, ಶಿಕ್ಷಣ ವಿರೋಧಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳ ವಿರೋಧಿ ಬಜೆಟ್. ಇದರಲ್ಲಿ ಪಶ್ಚಿಮ ಬಂಗಾಳಕ್ಕೆ ಏನನ್ನೂ ನೀಡಿಲ್ಲ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Next Story





