ನವಿಮುಂಬೈ: ಭಾಮೈದನ ಮದುವೆಗಾಗಿ ತನ್ನ ಪತ್ನಿ, ಅತ್ತೆಯಿಂದ ‘ಬೆತ್ತಲೆ’ವಿಧಿಗಳನ್ನು ಮಾಡಿಸಿದ ವ್ಯಕ್ತಿ

Photo : ndtv
ಥಾಣೆ: ಆಘಾತಕಾರಿ ಘಟನೆಯೊಂದರಲ್ಲಿ ನವಿಮುಂಬೈನ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಅತ್ತೆಯಿಂದ ಬೆತ್ತಲೆಯಾಗಿ ಕೆಲವು ವಾಮಾಚಾರ ವಿಧಿಗಳನ್ನು ಮಾಡಿಸಿದ್ದು, ಈ ಚಿತ್ರಗಳನ್ನು ಪ್ರಸಾರ ಮಾಡಿದ್ದಾನೆ ಎಂದು ವಾಶಿ ಪೋಲಿಸರು ಶನಿವಾರ ತಿಳಿಸಿದ್ದಾರೆ.
ಜುಲೈ 3ರಂದು ಆರೋಪಿಯ ಪತ್ನಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆಯನ್ನು ಆರಂಭಿಸಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಈ ವರ್ಷದ ಎಪ್ರಿಲ್ ಮತ್ತು ಜುಲೈ ನಡುವೆ ಆರೋಪಿಯ ನವಿಮುಂಬೈ ಮನೆಯಲ್ಲಿ ಈ ಘಟನೆಗಳು ನಡೆದಿವೆ ಎಂದು ಪೋಲಿಸರು ತಿಳಿಸಿದರು.
ಆರೋಪಿಯು ಮೂಲತಃ ಉತ್ತರ ಪ್ರದೇಶದ ದೇವರಿಯಾ ನಿವಾಸಿಯಾಗಿದ್ದಾನೆ.
ತನ್ನ ಭಾಮೈದ ಮದುವೆಗೆ ನೆರವಾಗಲು ಆರೋಪಿಯು ಎ.15ರಂದು ಬೆತ್ತಲೆಯಾಗಿ ಕೆಲವೊಂದು ವಿಧಿಗಳನ್ನು ನೆರವೇರಿಸುವಂತೆ ತನ್ನ ಪತ್ನಿ ಮತ್ತು ಅತ್ತೆಯನ್ನು ಬಲವಂತಗೊಳಿಸಿದ್ದ. ತಮ್ಮ ನಗ್ನ ಚಿತ್ರಗಳನ್ನು ತೆಗೆದುಕೊಳ್ಳುವಂತೆ ಅವರನ್ನು ಒತ್ತಾಯಿಸಿದ್ದ ಆರೋಪಿಯು ನಂತರ ಅವುಗಳೊಂದಿಗೆ ಅಜ್ಮೀರ್ ಬರುವಂತೆ ಸೂಚಿಸಿದ್ದ. ಆರೋಪಿಯ ಪತ್ನಿ ಆ ಚಿತ್ರಗಳೊಂದಿಗೆ ಅಜ್ಮೀರ್ಗೆ ತೆರಳಿದಾಗ ಆತ ಅವುಗಳನ್ನು ಆಕೆಯ ತಂದೆ ಮತ್ತು ಸೋದರನ ವಾಟ್ಸ್ಆ್ಯಪ್ ಖಾತೆಗಳಿಗೆ ಕಳುಹಿಸಿದ್ದ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಪೋಲಿಸರು ಆರೋಪಿಯ ವಿರುದ್ಧ ಬಿಎನ್ಎಸ್,ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಾರಾಷ್ಟ್ರ ವಾಮಾಚಾರ ಕಾಯ್ದೆ 2013ರಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.