ಪಾಕ್ ದಾಳಿಯಲ್ಲಿ ಮೃತಪಟ್ಟ ಭಾರತೀಯ ನಾಗರಿಕನನ್ನು ʼಭಯೋತ್ಪಾದಕʼ ಎಂದು ಬಿಂಬಿಸಿದ ರಾಷ್ಟ್ರೀಯ ಮಾಧ್ಯಮಗಳು
ಎಬಿಪಿ ನ್ಯೂಸ್, ಝೀ ನ್ಯೂಸ್ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರ

Screengrab:X/@zoo_bear
ಹೊಸದಿಲ್ಲಿ: ಮಂಗಳವಾರ ಗಡಿಯಾಚೆಗಿನಿಂದ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟ ಮುಸ್ಲಿಂ ಧರ್ಮಗುರುವನ್ನು “ಭಯೋತ್ಪಾದಕ” ಎಂದು ಹಲವಾರು ರಾಷ್ಟ್ರೀಯ ಸುದ್ದಿ ವಾಹಿನಿಗಳು ತಪ್ಪಾಗಿ ವರದಿ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪಾಕಿಸ್ತಾನದ ಕಡೆಯಿಂದ ನಡೆದ ಶೆಲ್ ದಾಳಿಯಲ್ಲಿ ಪೂಂಛ್ ಪ್ರಾಂತ್ಯದ ಇಸ್ಲಾಮಿಕ್ ವಿದ್ವಾಂಸ ಮತ್ತು ಸೆಮಿನರಿ ಶಿಕ್ಷಕ ಖಾರಿ ಮಹಮ್ಮದ್ ಇಕ್ಬಾಲ್ ಮೃತಪಟ್ಟಿದ್ದರು.
ಆದರೆ ʼಎಬಿಪಿ ನ್ಯೂಸ್ʼ ಮತ್ತು ʼಝೀ ನ್ಯೂಸ್ʼ ನಂತಹ ಮಾಧ್ಯಮಗಳು ಯಾವುದೇ ಪರಿಶೀಲನೆ ನಡೆಸದೆ, ಮಹಮ್ಮದ್ ಇಕ್ಬಾಲ್ ಅವರನ್ನು ʼಭಾರತದ ವಾಯುದಾಳಿಯಲ್ಲಿ ಮೃತಪಟ್ಟ ಭಯೋತ್ಪಾದಕʼ ಎಂಬಂತೆ ಸುದ್ದಿ ಬಿತ್ತರಿಸಿದೆ.
ಖಾರಿ ಇಕ್ಬಾಲ್ ಅವರು ಪೂಂಚ್ನ ಜಾಮಿಯಾ ಜಿಯಾ-ಉಲ್-ಉಲೂಮ್ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಬೋಧಿಸುತ್ತಿದ್ದರು ಎಂದು ಕಾಶ್ಮೀರದ ಪತ್ರಿಕೆ ʼದಿ ಕಾಶ್ಮೀರಿಯಾತ್ʼ ವರದಿ ಮಾಡಿದೆ.
ಪೂಂಚ್ ನಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಮೃತರಾದ ನಾಗರಿಕರ ಪಟ್ಟಿಯಲ್ಲಿ ಮಹಮ್ಮದ್ ಕಾರಿ ಅವರ ಹೆಸರಿದೆ ಎಂದು ದಿ ಕಾಶ್ಮೀರಿಯತ್ ವರದಿ ಧೃಡಪಡಿಸಿದೆ.
ಈ ಬಗ್ಗೆ ಮಾಧ್ಯಮಗಳನ್ನು ಖಂಡಿಸಿರುವ ಆಲ್ಟ್ನ್ಯೂಸ್ನ ಮುಹಮ್ಮದ್ ಝುಬೇರ್, “ಇದು ಭಾರತೀಯ ಸುದ್ದಿ ಚಾನೆಲ್ಗಳಿಂದ ನಾಚಿಕೆಗೇಡಿನ ಸಂಗತಿ. ಭಾರತದ ಪೂಂಚ್ನ ಖಾರಿ ಮಹಮ್ಮದ್ ಇಕ್ಬಾಲ್ ಅವರು ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರನ್ನು 'ಭಯೋತ್ಪಾದಕ' ಎಂದು (ಮಾಧ್ಯಮಗಳಲ್ಲಿ) ಚಿತ್ರಿಸಲಾಗುತ್ತಿದೆ." ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
This is shameful by Indian News Channels. Qari Mohammad Iqbal from poonch, India was killed yesterday in shelling from Pakistan is being portrayed as a 'terrorist' in multiple national Indian news channels. pic.twitter.com/8yXkUaJswd
— Mohammed Zubair (@zoo_bear) May 8, 2025







