1,460 ಕೋಟಿ ರೂಪಾಯಿಯ ವ್ಯವಹಾರ ನಡೆಸುವ 86 ವರ್ಷದ ಉದ್ಯಮಿಯೀಗ ಉಬರ್ ಚಾಲಕ!

Photo | indianexpress
ಫಿಜಿ, ನವೆಂಬರ್ 2: ಫಿಜಿಯ 86 ವರ್ಷದ ಹಿರಿಯ ಉದ್ಯಮಿ ಒಬ್ಬರು ಕೋಟ್ಯಂತರ ರೂಪಾಯಿಗಳ ವ್ಯವಹಾರಗಳ ಮಾಲೀಕರಾಗಿದ್ದರೂ ಪ್ರತಿದಿನ ಉಬರ್ ಕಾರು ಚಾಲನೆ ಮಾಡುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಅವರು ಉಬರ್ನಲ್ಲಿ ಗಳಿಸುವ ಹಣವನ್ನು ಸಂಪೂರ್ಣವಾಗಿ ಭಾರತದಲ್ಲಿನ ಬಡ ಬಾಲಕಿಯರ ಶಿಕ್ಷಣಕ್ಕಾಗಿ ನೀಡುತ್ತಾರೆ.
ಇತ್ತೀಚೆಗೆ ಭಾರತೀಯ ಉದ್ಯಮಿ ನವ ಷಾ ಅವರು ಫಿಜಿಯಲ್ಲಿ ಉಬರ್ ಸವಾರಿ ಮಾಡುವಾಗ ಈ ಹಿರಿಯ ಚಾಲಕರನ್ನು ಭೇಟಿಯಾದರು. ಮಾತುಕತೆ ವೇಳೆ ಶಾ ಅವರು ಕುತೂಹಲದಿಂದ “ನೀವು ವೆಚ್ಚಗಳನ್ನು ಹೇಗೆ ಪಾವತಿಸುತ್ತೀರಿ?” ಎಂದು ಕೇಳಿದಾಗ, ಚಾಲಕ ನಗುತ್ತಾ, “ನಾನು ಉದ್ಯಮಿ. ನನ್ನ ಕಂಪೆನಿಯು 1,460 ಕೋಟಿ ರೂಪಾಯಿಯ ವ್ಯವಹಾರ ಮಾಡುತ್ತದೆ", ಎಂದು ಉತ್ತರಿಸಿದರು.
ಸ್ಥಳೀಯ ಫಿಜಿ ಟೈಮ್ಸ್ ಪತ್ರಿಕೆ ಸೇರಿದಂತೆ, ಆ ಉದ್ಯಮಿ 13 ಆಭರಣ ಅಂಗಡಿಗಳು, ಆರು ರೆಸ್ಟೋರೆಂಟ್ಗಳು, ನಾಲ್ಕು ಸೂಪರ್ಮಾರ್ಕೆಟ್ ಗಳಳಿವೆ. ಕಂಪೆನಿಯ ವಾರ್ಷಿಕ ವ್ಯವಹಾರವು ಸುಮಾರು 1,460 ಕೋಟಿ ರೂಪಾಯಿಯಷ್ಟಿದೆ (ಅಂದಾಜು 175 ಮಿಲಿಯನ್ ಅಮೆರಿಕನ್ ಡಾಲರ್) ಎಂದು ಹಿರಿಯ ವ್ಯಕ್ತಿ ವಿನಮ್ರವಾಗಿ ಹಂಚಿಕೊಂಡರು.
ಆದರೆ ಅಚ್ಚರಿಯ ವಿಷಯವೆಂದರೆ, ಕಳೆದ ಹತ್ತು ವರ್ಷಗಳಿಂದ ಈ ಹಿರಿಯ ಉದ್ಯಮಿ ಪ್ರತಿ ವರ್ಷ 24 ಭಾರತೀಯ ಹುಡುಗಿಯರ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದಾರೆ. “ಆ ಪ್ರಾಯೋಜಕತ್ವದ ಹಣ ಉಬರ್ ಚಾಲನೆ ಮೂಲಕ ಬರುತ್ತದೆ,” ಎಂದು ಅವರು ತಮ್ಮ ಸದುದ್ದೇಶವನ್ನು ಬಹಿರಂಗಪಡಿಸಿದರು.
“ನನಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ನೀಡಿದ್ದೇನೆ, ಅವರು ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಇತರ ಬಾಲಕಿಯರ ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡಬಾರದೆ?” ಎಂದು ಅವರು ನಗುತ್ತಾ ಹೇಳಿದರು.
ತಮ್ಮ ಕುಟುಂಬದ ವ್ಯವಹಾರದ ಇತಿಹಾಸದ ಕುರಿತು ಮಾತನಾಡುತ್ತಾ ಅವರು, “ನನ್ನ ತಂದೆ 1929ರಲ್ಲಿ ಕೇವಲ ಐದು ಪೌಂಡ್ ಗಳಿಂದ ಈ ವ್ಯವಹಾರ ಪ್ರಾರಂಭಿಸಿದರು,” ಎಂದು ಹೆಮ್ಮೆಯಿಂದ ಹೇಳಿದರು.
"ಸಂಪತ್ತು, ವ್ಯವಹಾರ, ಪರಂಪರೆ ಎಲ್ಲವನ್ನೂ ಕಂಡ ವ್ಯಕ್ತಿ ಎಲ್ಲರಿಗೂ ಮಾದರಿಯಾಗಿದ್ದಾರೆ. ನಿಜವಾದ ಯಶಸ್ಸು ನೀವು ಎಷ್ಟು ಎತ್ತರಕ್ಕೆ ಏರುತ್ತೀರಿ ಎಂಬುದರಲ್ಲ, ನೀವು ದಾರಿಯುದ್ದಕ್ಕೂ ಎಷ್ಟು ಜನರನ್ನು ಮೇಲೆತ್ತುತ್ತೀರಿ ಎಂಬುದರ ಬಗ್ಗೆ ಅವರು ನನಗೆ ನೆನಪಿಸಿದರು", ಎಂದು ಶಾ ಅವರು ಪೋಸ್ಟ್ ಮಾಡಿದ್ದಾರೆ.
ನವ ಷಾ ಅವರು ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ, ಆ ವೀಡಿಯೊ ಕ್ಷಣಾರ್ಧದಲ್ಲಿ ವೈರಲ್ ಆಯಿತು. ಸಾವಿರಾರು ಜನರು ಈ ಹಿರಿಯ ಉದ್ಯಮಿಯ ಮಾನವೀಯ ಮನಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಒಬ್ಬ ಬಳಕೆದಾರು, “ಇವರು ನಿಜವಾದ ದಂತಕಥೆ. ತಾನು ಪಡೆದಿದ್ದನ್ನು ವಾಪಸ್ ನೀಡುವುದೇ ನಿಜವಾದ ಯಶಸ್ಸು", ಎಂದರು. ಮತ್ತೊಬ್ಬರು, “ಉಬರ್ ಓಡಿಸುವ ಅಗತ್ಯವಿಲ್ಲದ ವ್ಯಕ್ತಿ ಜನರೊಂದಿಗೆ ಸಂಪರ್ಕದಲ್ಲಿರಲು ಹೀಗೆ ಮಾಡುತ್ತಾರೆ. ಇದೇ ಅವರ ಚುರುಕಿನ ಮತ್ತು ದೀರ್ಘಾಯುಷ್ಯದ ರಹಸ್ಯ", ಎಂದು ಅಭಿಪ್ರಾಯಪಟ್ಟರು.
"ಈ ವರ್ಷದ ಆರಂಭದಲ್ಲಿ ಅವರು ವಿಮಾನ ನಿಲ್ದಾಣದಿಂದ ನನ್ನ ಉಬರ್ ಪ್ರಯಾಣದಲ್ಲಿ ಸಿಕ್ಕಿದ್ದರು. ಒಳ್ಳೆಯ ವ್ಯಕ್ತಿ, ಉತ್ತಮ ಸಂಭಾಷಣೆ. ಅವರು ನನ್ನ ಸೂಟ್ಕೇಸ್ಗಳನ್ನೂ ಲೋಡ್ ಮಾಡಿ ಇಳಿಸಿದರು, ಮಹಿಳೆಯರು ಲಗೇಜು ಎತ್ತುವುದು ಮಾಡಬಾರದು ಎಂದು ಹೇಳಿದರು!" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಕೃಪೆ : indianexpress







