ವಯನಾಡ್ ಭೂಕುಸಿತ: ಗಂಟೆಗಟ್ಟಲೆ ಕೆಸರಿನಲ್ಲಿ ಸಿಲುಕಿಕೊಂಡ ವ್ಯಕ್ತಿ; ಮನಕಲಕುವ ವಿಡಿಯೋ ವೈರಲ್
ನೀರಿನಲ್ಲಿ ಕೊಚ್ಚಿ ಹೋದ ಮನೆಗಳು, ಮೃತದೇಹಗಳು

PC : newindianexpress.com
ವಯನಾಡ್: ಇಂದು ಬೆಳಗ್ಗೆ ಸುಮಾರು 4 ಗಂಟೆಗೆ ಸಂಭವಿಸಿದ ತ್ರಿವಳಿ ಭೂಕುಸಿತದಿಂದ ವಯನಾಡ್ ನಲುಗಿ ಹೋಗಿದೆ. ಭಾರಿ ಮಳೆಯಿಂದಾಗಿ ಹಲವಾರು ಮನೆಗಳು ಹಾಗೂ ಮೃತದೇಹಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ವಯನಾಡ್ ನಾದ್ಯಂತ ನೀರವ ಮೌನ ಆವರಿಸಿದೆ.
ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿರುವ ವಯನಾಡ್ ನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ. ಈ ನಡುವೆ, ಪ್ರವಾಹಕ್ಕೆ ಸಿಲುಕಿದ ವ್ಯಕ್ತಿಯೊಬ್ಬ, ಗಂಟೆಗಟ್ಟಲೆ ಕೆಸರಿನಲ್ಲಿ ಸಿಕ್ಕಿಕೊಂಡ ಘಟನೆ ವರದಿಯಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
A man has been stuck in slush for hours, crying out for help in #WayanadLandslide. Rescue operations on. @xpresskerala
— The New Indian Express (@NewIndianXpress) July 30, 2024
READ: https://t.co/oNNlVC3P5z pic.twitter.com/7Kvjp9c4BF
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಹಲವಾರು ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ.