ಲಕ್ನೋ: ಮಾವು ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಹಣ್ಣುಗಳ ತಟ್ಟೆಯನ್ನೇ ಹೊತ್ತೊಯ್ದ ಜನರು!
ವಿಡಿಯೋ ವೈರಲ್

Screengrab:X/@TARUNspeakss
ಲಕ್ನೋ: ಲಕ್ನೋದಲ್ಲಿ ನಡೆಸ ʼಆಮ್ ಮಹೋತ್ಸವʼ (ಮಾವು ಮೇಳದ)ವು ಕಡೆಯ ದಿನದಂದು ಜನರ ನೂಕುನುಗ್ಗಲಿನಿಂದ ಸಂಪೂರ್ಣ ಅಸ್ತವ್ಯಸ್ತಗೊಂಡು ಮುಕ್ತಾಯಗೊಂಡಿದೆ.
ಹಣ್ಣುಗಳ ಪ್ರದರ್ಶನ ಪ್ರದೇಶಕ್ಕೆ ಭೇಟಿ ನೀಡಿದವರು ಪ್ರದರ್ಶನಕ್ಕಾಗಿ ಮಾತ್ರ ಮೀಸಲಾಗಿರಿಸಿದ್ದ ಮಾವಿನಹಣ್ಣಿನ ತಟ್ಟೆಗಳನ್ನು ಹಿಡಿದುಕೊಂಡು ಹೋಗಿದ್ದು, ಇದರಿಂದಾಗಿ ಸಂಪೂರ್ಣ ನೂಕುನುಗ್ಗಲಾಗಿದ್ದು, ಜನರು ತಳ್ಳಾಡಿಕೊಂಡು ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ಜುಲೈ 4 ರಿಂದ 6 ರವರೆಗೆ ನಡೆದ ಲಕ್ನೋ ಮಾವಿನ ಉತ್ಸವದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಪ್ರದೇಶದಲ್ಲಿ ಬೆಳೆಯುವ ಮಾವಿನ ಹಣ್ಣುಗಳ ಸಮೃದ್ಧ ವೈವಿಧ್ಯತೆಯನ್ನು ಪ್ರದರ್ಶಿಸಲು ವಾರ್ಷಿಕವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮಾದರಿ ಮತ್ತು ಖರೀದಿಗಾಗಿ ಪ್ರತ್ಯೇಕ ವಿಭಾಗಗಳನ್ನು ಗೊತ್ತುಪಡಿಸಲಾಗಿತ್ತು.
ಆದರೆ, ಕೊನೆಯ ದಿನದ ಸಂಜೆ ಗಡಿಯಾರ ಮೊಳಗುತ್ತಿದ್ದಂತೆ ಜನಸಮೂಹವು, ಪ್ರಕಟಣೆಗಳು ಮತ್ತು ಫಲಕಗಳನ್ನು ಲೆಕ್ಕಿಸದೆ, ಪ್ರದರ್ಶನಕ್ಕೆ ಇಡಲಾಗಿದ್ದ ಮಾವಿನ ಹಣ್ಣುಗಳನ್ನು ಕಸಿದುಕೊಂಡು ನಿರ್ಗಮನ ದ್ವಾರಗಳ ಸಮೀಪ ಧಾವಿಸಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆಗಿದ್ದು, ಕಾರ್ಯಕ್ರಮ ನಿರ್ವಹಣೆ, ಸಾರ್ವಜನಿಕ ನಡವಳಿಕೆ ಮತ್ತು ನಾಗರಿಕ ಜವಾಬ್ದಾರಿಯ ಸುತ್ತ ಚರ್ಚೆಗಳನ್ನು ಹುಟ್ಟುಹಾಕಿದೆ.
“ನಮ್ಮ ಸಂಸ್ಕೃತಿಯಲ್ಲಿ ಸ್ವಾಭಿಮಾನ, ಗೌರವ, ಸಮಗ್ರತೆ ಮತ್ತು ಪ್ರಾಮಾಣಿಕತೆಗೆ ಬೆಲೆ ನೀಡಲಾಗುತ್ತಿದ್ದ ಕಾಲವಿತ್ತು. ಕ್ರಮೇಣ ನಾವು ಅದನ್ನು ಕಳೆದುಕೊಂಡಿದ್ದೇವೆ ಎಂಬುದು ಹೃದಯವಿದ್ರಾವಕವಾಗಿದೆ” ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಹೇಳಿದರು.
“ನಾಗರಿಕ ಪ್ರಜ್ಞೆಯಿಲ್ಲದೆ ವೇಗವಾಗಿ ಬೆಳೆಯುತ್ತಿರುವ ಜಿಡಿಪಿ, ಎಂತಹ ವಿಪರ್ಯಾಸ,” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
Last day of Mango festival in Lucknow.
— Tarun Gautam (@TARUNspeakss) July 7, 2025
This is our civic sense. No wonder, other countries don't want Indians on their land. pic.twitter.com/iFFjM7RGvp







