Mann Ki Baat: ದುಬೈನ ʼಕನ್ನಡ ಪಾಠ ಶಾಲೆʼಗೆ ಪ್ರಧಾನಿ ಮೋದಿ ಶ್ಲಾಘನೆ

ಪ್ರಧಾನಿ ಮೋದಿ | Photo Credit : PTI
ಹೊಸದಿಲ್ಲಿ: ʼಮನ್ ಕಿ ಬಾತ್ʼ ನಲ್ಲಿ ಪ್ರಧಾನಿ ಮೋದಿ ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಮಾತೃಭಾಷಾ ಪ್ರೇಮವನ್ನು ವಿಶೇಷವಾಗಿ ಶ್ಲಾಘಿಸಿದರು.
ದುಬೈನಲ್ಲಿ ವಾಸವಾಗಿರುವ ಕನ್ನಡ ಕುಟುಂಬಗಳು ‘ನಮ್ಮ ಮಕ್ಕಳು ತಂತ್ರಜ್ಞಾನ ಜಗತ್ತಿನಲ್ಲಿ ಬೆಳೆಯುತ್ತಿದ್ದಾರೆ, ಆದರೆ ಅವರು ತಮ್ಮ ಭಾಷೆಯಿಂದ ದೂರವಾಗುತ್ತಿದ್ದಾರೆಯೇ ಎಂಬ ಮಹತ್ವದ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡಿದ್ದವು. ಈ ಚಿಂತನೆಯಿಂದ ಹುಟ್ಟಿದ್ದೇ ‘ಕನ್ನಡ ಪಾಠಶಾಲೆ’. ಇಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಓದಲು, ತಿಳಿದುಕೊಳ್ಳಲು, ಬರೆಯಲು ಮತ್ತು ಮಾತನಾಡಲು ಕಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಫಿಜಿಯಲ್ಲಿ ಭಾರತೀಯ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಪ್ರಶಂಸನೀಯ ಕಾರ್ಯ ನಡೆಯುತ್ತಿದೆ. ಹೊಸ ಪೀಳಿಗೆಯನ್ನು ತಮ್ಮ ಮಾತೃಭಾಷೆ ತಮಿಳಿನೊಂದಿಗೆ ಸಂಪರ್ಕಿಸಲು ವಿವಿಧ ಮಟ್ಟಗಳಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕಳೆದ ತಿಂಗಳು ಫಿಜಿಯ ರಾಕಿರಾಕಿ ಪ್ರದೇಶದಲ್ಲಿಯ ಶಾಲೆಯೊಂದು ಮೊದಲ ಬಾರಿಗೆ ತಮಿಳು ದಿನವನ್ನು ಆಚರಿಸಿದೆ. ಇದು ಮಕ್ಕಳಿಗೆ ತಮ್ಮ ಹೆಮ್ಮೆಯನ್ನು ತಮ್ಮದೇ ಭಾಷೆಯಲ್ಲಿ ಬಹಿರಂಗವಾಗಿ ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸಿತ್ತು ಎಂದರು.





