ರಸ್ತೆ ದುರಂತದಲ್ಲಿ ಮನುಭಾಕರ್ ರ ತಾಯಿಯ ಸಹೋದರ, ಅಜ್ಜಿ ದಾರುಣ ಮೃತ್ಯು

ಮನುಭಾಕರ್ | PC : PTI
ಹೊಸದಿಲ್ಲಿ: ಹರ್ಯಾಣದ ಚಾಕಿ ದಾದ್ರಿ ಜಿಲ್ಲೆಯಲ್ಲಿ ರವಿವಾರ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಒಲಿಂಪಿಕ್ ಪದಕ ವಿಜೇತೆ ಮನುಭಾಕರ್ ಅವರ ತಾಯಿಯ ಸಹೋದರ ಹಾಗೂ ಅಜ್ಜಿ ಸಾವನ್ನಪ್ಪಿದ್ದಾರೆ.
ಮನುಭಾಕರ್ ಅವರ ಸಂಬಂಧಿಕರು ಪ್ರಯಾಣಿಸುತ್ತಿದ್ದ ಸ್ಕೂಟರ್ ಗೆ, ಕಾರೊಂದು ಡಿಕ್ಕಿ ಹೊಡೆದು ಅವಘಡ ಸಂಭವಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಕೂಟರ್ನಲ್ಲಿದ್ದ ಮನುಭಾಕರ್ ಅವರ ತಾಯಿಯ ಸಹೋದರ ಹಾಗೂ ಅಜ್ಜಿ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಕಾರಿನ ಚಾಲಕ ಪರಾರಿಯಾಗಿದ್ದಾನೆಂದು ಅವರು ಹೇಳಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶೂಟಿಂಗ್ನಲ್ಲಿ ಚಿನ್ನ ಗೆಲ್ಲುವ ಮೂಲಕ, ಒಲಿಂಪಿಕ್ ಗೇಮ್ಸ್ನ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನ ಗೆದ್ದ ಸ್ವಾತಂತ್ರ್ಯೋತ್ತರ ಭಾರತದ ಪ್ರಥಮ ಕ್ರೀಡಾಪಟುವೆಂಬ ದಾಖಲೆಗೆ ಮನುಭಾಕರ್ ಪಾತ್ರರಾಗಿದ್ದಾರೆ.
Next Story





