ಕೇದಾರನಾಥ ಧಾಮದ ಬಳಿಯ ಗಾಂಧಿ ಸರೋವರವನ್ನು ಅಪ್ಪಳಿಸಿದ ಭಾರಿ ಹಿಮಪಾತ

Photo Credit: PTI
ರುದ್ರಪ್ರಯಾಗ್ : ಕೇದಾರನಾಥ ಧಾಮದಿಂದ ನಾಲ್ಕು ಕಿಮೀ ಮೇಲಿರುವ ಗಾಂಧಿ ಸರೋವರಕ್ಕೆ ಭಾರಿ ಹಿಮಪಾತ ಅಪ್ಪಳಿಸಿರುವ ಘಟನೆ ರವಿವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.
ಚೋರಬರಿ ಹಿಮಗಡ್ಡೆಯಲ್ಲಿ ಕಾಣಿಸಿಕೊಂಡ ಈ ಹಿಮಪಾತವು, ಅದೇ ಪ್ರದೇಶದಲ್ಲಿನ ಕಣಿವೆಗೆ ಉರುಳಿತಾದರೂ ಯಾವುದೇ ಜೀವ ಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಮುಂಜಾನೆ 5 ಗಂಟೆಯ ಸಮಯದಲ್ಲಿ ಸಂಭವಿಸಿದ ಈ ನೈಸರ್ಗಿಕ ವಿದ್ಯಮಾನವನ್ನು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಲು ತೆರಳಿದ್ದ ಭಕ್ತಾದಿಗಳು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆರೆ ಹಿಡಿದಿದ್ದಾರೆ.
ಭಾರಿ ಪ್ರಮಾಣದ ಹಿಮಗಡ್ಡೆಗಳು ಕೆಳಗೆ ಉರುಳಿ, ಕಂದಕವೊಂದಕ್ಕೆ ಬಿದ್ದ ನಂತರ ನಿಂತಿರುವುದು ಕಂಡು ಬಂದಿದೆ. ಕೇದಾರನಾಥ ಕಣಿವೆಯ ಮೇಲ್ಭಾಗದಲ್ಲಿರುವ ಹಿಮಚ್ಛಾದಿತ ಮೇರು-ಸುಮೇರು ಪರ್ವತ ವಲಯದ ಕೆಳಗಿರುವ ಚೋರಬರಿ ಹಿಮಗಡ್ಡೆಯಲ್ಲಿರುವ ಗಾಂಧಿ ಸರೋವರದ ಮೇಲ್ಭಾಗದಲ್ಲಿ ಈ ಹಿಮಪಾತ ಸಂಭವಿಸಿದೆ ಎಂದು ವರದಿಯಾಗಿದೆ.
VIDEO | Uttarakhand: An avalanche occurred over Gandhi Sarovar in Kedarnath. No loss of life and property was reported. More details are awaited. pic.twitter.com/yfgTrYh0oc
— Press Trust of India (@PTI_News) June 30, 2024