ಗುಜರಾತ್ನ ಕಚ್ ಜಿಲ್ಲೆಯಲ್ಲಿ ಲಘು ಭೂಕಂಪನ; ಮೇಘಾಲಯದಲ್ಲೂ ಕಂಪಿಸಿದ ಭೂಮಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : ಗುಜರಾತ್ ಕಚ್ ಜಿಲ್ಲೆಯಲ್ಲಿ ರವಿವಾರ ಎರಡು ಲಘು ಭೂಕಂಪನಗಳು ಸಂಭವಿಸಿದೆ. ಮೇಘಾಲಯದಲ್ಲೂ ಭೂಕಂಪನದ ಅನುಭವವಾಗಿದೆ. ಆದರೆ, ಯಾವುದೇ ಗಾಯ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಕಂಪನವು 2.6 ತೀವ್ರತೆಯನ್ನು ಹೊಂದಿದ್ದು, ಬೆಳಿಗ್ಗೆ 6:41ಕ್ಕೆ ಸಂಭವಿಸಿದೆ. ಭೂಕಂಪನದ ಕೇಂದ್ರಬಿಂದು ಧೋಲಾವಿರದಿಂದ ಪೂರ್ವ ಆಗ್ನೇಯಕ್ಕೆ 24 ಕಿ.ಮೀ. ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ರವಿವಾರ 4 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಮೇಘಾಲಯದಲ್ಲಿಯೂ ಭೂ ಕಂಪನದ ಅನುಭವವಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
Next Story





