ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಮೋದಿ ಭಾಷಣವಿಲ್ಲ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ,ಸೆ.6: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವುದಿಲ್ಲವೆಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
80ನೇ ವಿಶ್ವಸಂಸ್ಥೆಯ ಮಹಾಧಿವೇಶನವು ಸೆಪ್ಟೆಂಬರ್ 9ರಂದು ಆರಂಭಗೊಳ್ಳಲಿದೆೆ.ಉನ್ನತ ಮಟ್ಟದ ಸಾಮಾನ್ಯ ಚರ್ಚೆಗಳು ಸೆಪ್ಟೆಂಬರ್ 23ರಿಂದ 29ರವರೆಗೆನಡೆಯಲಿದೆ.
ಸಂಪ್ರದಾಯದಂತೆ ಪ್ರಪ್ರಥಮವಾಗಿ ಬ್ರೆಝಿಲ್ ಭಾಷಣ ಮಾಡಲಿದ್ದು, ಬಳಿಕ ಅಮೆರಿಕ ಭಾಷಣ ಮಾಡಲಿದೆ.
ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾಷಣ ಮಾಡಲಿರುವವರ ಪರಿಷ್ಕೃತ ಸಂಭಾವ್ಯ ಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸೆಪ್ಟೆಂಬರ್ 27ರಂದು ಭಾಷಣ ಮಾಡಲಿದ್ದಾರೆ. ವಿಶ್ವಸಂಸ್ಥೆಯು ಜುಲೈನಲ್ಲಿ ಪ್ರಕಟಿಸಿದ್ದ ಸಂಭಾವ್ಯ ಭಾಷಣಕಾರರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 23ರಂದು ಮಾತನಾಡಲಿದ್ದರು. ಇಸ್ರೇಲ್, ಚೀನಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ನಾಯಕರು ಕೂಡಾ ಆ ದಿನವೇ ಮಾತನಾಡಲಿದ್ದಾರೆ.





