'ಆಪರೇಷನ್ ಸಿಂಧೂರ' ಟ್ರೇಡ್ ಮಾರ್ಕ್ಗಾಗಿ ಅಂಬಾನಿ ಒಡೆತನದ ರಿಲಯನ್ಸ್ ಸೇರಿದಂತೆ ಹಲವರಿಂದ ಅರ್ಜಿ

Photo credit: X/@adgpi
ಹೊಸದಿಲ್ಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸೇರಿದಂತೆ ಹಲವರು 'ಆಪರೇಷನ್ ಸಿಂಧೂರ' ಟ್ರೇಡ್ ಮಾರ್ಕ್ಗಾಗಿ ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಗೆ ಅರ್ಜಿ ಸಲ್ಲಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ 'ಆಪರೇಷನ್ ಸಿಂಧೂರ' ಕಾರ್ಯಚರಣೆಯನ್ನು ನಡೆಸಿದೆ. ಇದರ ಬೆನ್ನಲ್ಲೇ ರಿಲಯನ್ಸ್ ಸೇರಿದಂತೆ ಕೆಲ ಸಂಸ್ಥೆಗಳು 'ಆಪರೇಷನ್ ಸಿಂಧೂರ' ಟ್ರೇಡ್ ಮಾರ್ಕ್ಗಾಗಿ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.
ಶಿಕ್ಷಣ ಮತ್ತು ಮನರಂಜನಾ ಸೇವೆಗಳನ್ನು ಒಳಗೊಂಡಿರುವ ವರ್ಗ 41ರ ಅಡಿಯಲ್ಲಿ 'ಸರಕು ಮತ್ತು ಸೇವೆಗಳಿಗೆ' ಈ ಪದದ ನೋಂದಣಿಯನ್ನು ಕೋರಲಾಗಿದೆ.
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಂಪೆನಿ ಮಾತ್ರವಲ್ಲದೆ ಮುಕೇಶ್ ಚೇತನ್ ಅಗರ್ವಾಲ್, ನಿವೃತ್ತ ಭಾರತೀಯ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್, ದಿಲ್ಲಿ ಮೂಲದ ವಕೀಲ ಅಲೋಕ್ ಕೊಠಾರಿ ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
Next Story





