ಮುಂಬೈ: ಥೈಲ್ಯಾಂಡ್ ನಿಂದ ಬರುತ್ತಿದ್ದ ಪ್ರಯಾಣಿಕನಿಂದ 16 ಜೀವಂತ ಹಾವುಗಳು ವಶ

Photo: X/@mumbaicus3
ಮುಂಬೈ: ಥೈಲ್ಯಾಂಡ್ ನಿಂದ ಮುಂಬೈಗೆ ಬಂದಿಳಿದ ಪ್ರಯಾಣಿಕನಿಂದ ಜೀವಂತ ಹಾವುಗಳನ್ನು ಮುಂಬೈ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಕ್ರಮ ವನ್ಯಜೀವಿ ಸಾಗಾಟದ ಮತ್ತೊಂದು ಪ್ರಯತ್ನವನ್ನು ಮುಂಬೈ ಕಸ್ಟಮ್ ಅಧಿಕಾರಿಗಳು ತಡೆದಿದ್ದಾರೆ. ರವಿವಾರ ಥೈಲ್ಯಾಂಡ್ ನಿಂದ ಮರಳುತ್ತಿದ್ದ ಪ್ರಯಾಣಿಕನ ಬಳಿಯಿಂದ 16 ಜೀವಂತ ಹಾವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಪ್ರಯಾಣಿಕನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Next Story







