ಮುಂಬೈ: ಪರೀಕ್ಷಾರ್ಥ ಸಂಚಾರದ ಸಂದರ್ಭ ವಾಲಿದ ಮೋನೋ ರೈಲು!

Photo Credit : deccanherald
ಮುಂಬೈ, ನ. 5: ಮುಂಬೈಯ ವಡಾಲಾ ಡಿಪೋದಲ್ಲಿ ಬುಧವಾರ ಬೆಳಗ್ಗೆ ಪರೀಕ್ಷಾರ್ಥ ಸಂಚಾರ ಸಮಯದಲ್ಲಿ ಮೋನೋ ರೈಲೊಂದು ವಾಲಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ‘‘ಸಣ್ಣ ಘಟನೆ’’ ಎಂದು ಹೇಳಿರುವ ಮೋನೋ ರೈಲನ್ನು ನಿರ್ವಹಿಸುತ್ತಿರುವ ಮಹಾ ಮುಂಬೈ ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ (ಎಂಎಂಎಂಒಪಿಎಲ್), ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದೆ.
ಘಟನೆ ಸಂದರ್ಭ ರೈಲಿನಲ್ಲಿ ಸಿಬ್ಬಂದಿಗಳನ್ನು ಹೊರತುಪಡಿಸಿ ಯಾರೂ ಇರಲಿಲ್ಲ ಎಂದು ಅದು ಹೇಳಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾದ ಫೋಟೊ ಹಾಗೂ ವೀಡಿಯೊಗಳಲ್ಲಿ ಮೋನೋ ರೈಲು ತುಸ ವಾಲಿರುವುದು ಕಂಡು ಬಂದಿದೆ.
ಈ ಘಟನೆ ಬೆಳಗ್ಗೆ 9 ಗಂಟೆಗೆ ವರದಿಯಾಗಿದೆ. ಮೋನೋ ರೈಲಿನಿಂದ ಇಬ್ಬರು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
Next Story





