ಮುಂಬೈ | ತಾಂತ್ರಿಕ ದೋಷ; ಹಠಾತ್ ನಿಂತ ಮೋನೋ ರೈಲು

PC | PTI
ಮುಂಬೈ, ಸೆ. 15: ಮುಂಬೈಯಲ್ಲಿ ಸೋಮವಾರ ಮೋನೋ ರೈಲೊಂದು ತಾಂತ್ರಿಕ ದೋಷದಿಂದ ಹಠಾತ್ತನೆ ನಿಂತಿದ್ದು, ಅದರಲ್ಲಿದ್ದ 17 ಪ್ರಯಾಣಿಕರನ್ನು ರಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಏಂಟಾಪ್ ಹಿಲ್ ಬಸ್ ಡಿಪೋ ಹಾಗೂ ವಾಡಾಲದಲ್ಲಿರುವ ಜಿಟಿಬಿಎನ್ ಮೋನೋ ರೈಲು ನಿಲ್ದಾಣದ ನಡುವೆ ನಡೆದಿದೆ.
ಕೆಲವು ತಾಂತ್ರಿಕ ದೋಷಗಳಿಂದ ಬೆಳಗ್ಗೆ 7.16ಕ್ಕೆ ಈ ಮೋನೋ ರೈಲು ಹಠಾತ್ ನಿಂತಿತು. ಸುಮಾರು 45 ನಿಮಿಷಗಳ ನಂತರ ಅದರಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲಾಯಿತು. ಅನಂತರ ಅವರನ್ನು ಇನ್ನೊಂದು ಮೋನೋ ರೈಲಿಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





