ಕಲಾಪದ ವೇಳೆ ನ್ಯಾಯಾಧೀಶರನ್ನು ಮೈ ಲಾರ್ಡ್ ಎನ್ನಬೇಡಿ : ಅಲಹಬಾದ್ ಹೈಕೋರ್ಟ್ ನ ಬಾರ್ ಕೌನ್ಸಿಲ್

ಅಲಹಬಾದ್ ಹೈಕೋರ್ಟ್ | PC : PTI
ಹೊಸದಿಲ್ಲಿ : ಕಲಾಪದ ವೇಳೆ ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್ಶಿಪ್’ ಎಂದು ಕರೆಯಬಾರದು ಎಂದು ಅಲಹಬಾದ್ ಹೈಕೋರ್ಟ್ ನ ಬಾರ್ ಕೌನ್ಸಿಲ್ ತನ್ನ ಸದಸ್ಯರಿಗೆ ಮನವಿ ಮಾಡಿದೆ.
ನ್ಯಾಯಾಲಯದ ಕಲಾಪದ ವೇಳೆ ಹೀಗೆ ಕರೆಯುವ ಬದಲು ‘ಸರ್’ ಅಥವಾ ‘ಯೂವರ್ ಹಾನರ್’ (‘ಮಾನ್ಯರೇ’) ಎಂದು ಕರೆದರೆ ಸಾಕು ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಾಂಗ ಕಲಾಪಗಳ ಸಂದರ್ಭದಲ್ಲಿ ‘ಮೈ ಲಾರ್ಡ್ ಮತ್ತು ಯುವರ್ ಲಾರ್ಡ್ ಶಿಪ್ಸ್’ ಎಂದು ಪದೇ ಪದೇ ಸಂಬೋಧಿಸುವ ಬಗ್ಗೆ ಸುಪ್ರಿಂ ಕೋರ್ಟ್ ನ ನ್ಯಾಯಧೀಶ ಪಿ.ಎಸ್. ನರಸಿಂಹ ಅವರು ಕಳೆದ ವರ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೇ ಹೇಳುವುದನ್ನು ನಿಲ್ಲಿಸಿದರೆ ತಮ್ಮ ವೇತನದಲ್ಲಿ ಅರ್ಧ ವೇತನ ನೀಡುವುದಾಗಿಯೂ ಅವರು ವಕೀಲರೊಬ್ಬರನ್ನು ಉದ್ದೇಶಿಸಿ ಹೇಳಿದ್ದರು.
#JustIN | #AllahabadHighCourt Bar Association has requested its members not to address judges as 'My Lord' or 'Your Lordship' and rather use 'Sir', 'Your Honour' or 'माननीय'.
— Live Law (@LiveLawIndia) July 11, 2024
"...some of the hon'ble judges are treating themselves as God..." says HCBA in an official statement. pic.twitter.com/mBWPcqdfnx