ನಾಗಪುರ | ಸ್ಫೋಟಕ ತಯಾರಿ ಘಟಕದಲ್ಲಿ ಸ್ಫೋಟ: ಇಬ್ಬರು ಮೃತ್ಯು

ಸಾಂದರ್ಭಿಕ ಚಿತ್ರ
ನಾಗಪುರ: ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ರವಿವಾರ ಸ್ಫೋಟಕಗಳ ಉತ್ಪಾದನಾ ಘಟಕವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇತರ ಹಲವರು ಗಾಯಗೊಂಡಿದ್ದಾರೆ.
ನಾಗಪು ನಗರದಿಂದ 50 ಕಿ.ಮೀ.ದೂರದ ಕಟೊಲ್ ತಹಶೀಲ್ನ ಕೋತ್ವಾಲ್ ಬುದಿಯಲ್ಲಿರುವ ಎಸ್ಬಿಎಲ್ ಎನರ್ಜಿ ಲಿಮಿಟೆಡ್ ಘಟಕದಲ್ಲಿ ಮಧ್ಯಾಹ್ನ 1:30ರ ವೇಳೆಗೆ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು, ಇತರ ಹಲವರು ಗಾಯಗೊಂಡಿದ್ದರು. ಸ್ಫೋಟದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಸ್ಫೋಟದ ಬಳಿಕ ಘಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತಾದರೂ, ಅದನ್ನು ತಕ್ಷಣವೇ ನಂದಿಸಲಾಯಿತೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Next Story