ನಾಗಪುರ: ಗ್ಯಾಂಗ್ ಸ್ಟರ್ ನ ಪತ್ನಿ ಅಪಘಾತದಲ್ಲಿ ಮೃತ್ಯು; ಸಹಚರನ ಹತ್ಯೆಗಾಗಿ 40 ಮಂದಿ ಗ್ಯಾಂಗ್ ಸದಸ್ಯರಿಂದ ನರಬೇಟೆ

ಸಾಂದರ್ಭಿಕ ಚಿತ್ರ | NDTV
ನಾಗಪುರ, ಜು.6: ಇಲ್ಲಿನ ಕುಖ್ಯಾತ ಗ್ಯಾಂಗ್ ಸ್ಟರ್ ನ ಪತ್ನಿಯೊಬ್ಬಳು, ಗ್ಯಾಂಗ್ ನ ಸದಸ್ಯನೊಬ್ಬನೊಂದಿಗೆ ಬೈಕ್ ನಲ್ಲಿ ಸುತ್ತಾಡಲು ತೆರಳಿದ್ದಾಗ,ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆಯು ನಗರದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ.
ಗ್ಯಾಂಗ್ ಸ್ಟರ್ ನ ಪತ್ನಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದನೆನ್ನಲಾದ ಆರ್ಷದ್ ಟೋಪಿಯನ್ನು ಹತ್ಯೆಗೈಯಲು ಕುಖ್ಯಾತ ‘ಇಪ್ಪಾ’ ಗ್ಯಾಂಗ್ ನ 40 ಮಂದಿ ಸದಸ್ಯರು ಆತನ ಬೇಟೆಯಾಡುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಅರ್ಷದ್ ಟೋಪಿ ಜೊತೆ ಮಹಿಳೆಯು ದ್ವಿಚಕ್ರವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಜೆಸಿಬಿ ಡಿಕ್ಕಿ ಹೊಡೆದು ಆಕೆ ಗಂಭೀರ ಗಾಯಗೊಂಡಿದ್ದಳು. ಘಟನೆಯಲ್ಲಿ ಆರ್ಷದ್ ಗೆ ಸಣ್ಣಪುಟ್ಟ ಗಾಯಗಳಾಗಿದ್ವದು. ಮಹಿಳೆಯನ್ನು ಮೊದಲು ಎರಡು ಖಾಸಗಿ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಯಿತಾದರೂ, ಅವು ಚಿಕಿತ್ಸೆ ನೀಡಲು ನಿರಾಕರಿಸಿದವು. ಕೊನೆಗೆ ಆರ್ಷದ್ ಆ್ಯಂಬುಲೆನ್ಸ್ ಚಾಲಕನಿಗೆ ಹಣ ಪಾವತಿಸಿ ಆಕೆಯನ್ನು ನಾಗಪುರ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದನು. ಮಾರನೆ ದಿನ ಆಕೆ ಕೊನೆಯುಸಿರೆಳೆದಿದ್ದಳು.
ಮಹಿಳೆ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆಯೇ, ಇದೊಂದು ಯೋಜಿತ ಹತ್ಯೆಯೆಂದು ‘ಇಪ್ಪಾ’ ಗ್ಯಾಂಗ್ ನ ಸದಸ್ಯರು ಶಂಕಿಸಿದ್ದಾರೆ ಹಾಗೂ ಆತನ ಹತ್ಯೆಗೈಯಲು ಪಣತೊಟ್ಟಿದ್ದಾರೆಂದು ಇರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಸರುವುದಾಗಿ NDTV ವರದಿ ಮಾಡಿದೆ.
ಆರ್ಷದ್ ಟೋಪಿ ತಲೆಮರೆಸಿಕೊಂಡಿದ್ದು, ಪೊಲೀಸ್ ರಕ್ಷಣೆ ಯಾಚಿಸಿದ್ದಾನೆಂದು ತಿಳಿದುಬಂದಿದೆ.