ಸೋಮಾಲಿಯಾ ಕಡಲ್ಗಳ್ಳರಿಂದ ಅಪಹೃತ ಇರಾನಿನ ಮೀನುಗಾರಿಕಾ ಹಡಗನ್ನು ರಕ್ಷಿಸಿದ ನೌಕಾ ಪಡೆ ಯುದ್ಧ ನೌಕೆ

Photo: @IndiaToday \X
ಹೊಸದಿಲ್ಲಿ : ಭಾರತೀಯ ನೌಕಾ ಪಡೆಯ ಯುದ್ಧ ನೌಕೆ ಐಎನ್ಎಸ್ ಸುಮಿತ್ರಾ ಸೋಮಾಲಿಯ ಪೂರ್ವ ಕರಾವಳಿ ಹಾಗೂ ಏಡನ್ ಕೊಲ್ಲಿಯಲ್ಲಿ ಸೋಮಾಲಿಯ ಕಡಲ್ಗಳ್ಳರಿಂದ ಅಪಹೃತವಾದ ಇರಾನ್ ನ ಮೀನುಗಾರಿಕಾ ಹಡಗಳನ್ನು ಸೋಮವಾರ ಬಿಡುಗಡೆ ಮಾಡಿದೆ ಎಂದು ಭಾರತೀಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲಿ ಕಡಲ್ಗಳ್ಳರ ವಿರೋಧಿ ಕಾರ್ಯಾಚರಣೆಗೆ ನಿಯೋಜಿಸಲಾಗಿರುವ ಐಎನ್ಎಸ್ ಸುಮಿತ್ರಾ ಇರಾನ್ ನ ಇಮಾನ್ ಹೆಸರಿನ ಮೀನುಗಾರಿಕಾ ಹಡಗು ಅಪಾಯಕ್ಕೆ ಸಿಲುಕಿರುವ ಸಂದೇಶ ಸ್ವೀಕರಿಸಿದ ಬಳಿಕ ಕಾರ್ಯಾಚರಣೆ ನಡೆಸಿ ಅದನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿತು ಎಂದು ಅವರು ತಿಳಿಸಿದ್ದಾರೆ.
ಮೀನುಗಾರಿಕಾ ಹಡಗಿಗೆ ಸೋಮಾಲಿಯದ ಕಡಲ್ಗಳ್ಳರು ಹತ್ತಿದರು ಹಾಗೂ ಅದರಲ್ಲಿದ್ದ 17 ಮಂದಿ ಸಿಬ್ಬಂದಿಯನ್ನು ಒತ್ತೆ ಸೆರೆ ಇರಿಸಿಕೊಂಡರು ಎಂದು ಅವರು ತಿಳಿಸಿದ್ದಾರೆ.
‘‘ಇರಾನ್ ನ ಮೀನುಗಾರಿಕಾ ಹಡಗು ಇಮಾನ್ನ ಅಪಹರಣಕ್ಕೆ ಸಂಬಂಧಿಸಿ ಅಪಾಯಕ್ಕೆ ಸಿಲುಕಿರುವ ಸಂದೇಶಕ್ಕೆ ಸೋಮಾಲಿಯಾ ಪೂರ್ವ ಕರಾವಳಿ ಹಾಗೂ ಏಡನ್ ಕೊಲ್ಲಿಯಲ್ಲಿದ್ದ ಕಡಲ್ಗಳ್ಳರ ವಿರೋಧಿ ಕಾರ್ಯಾಚರಣೆ ನಡೆಸುವ ಯುದ್ಧ ನೌಕೆ ಐಎನ್ಎಸ್ ಸುಮಿತ್ರಾ ಸ್ವೀಕರಿಸಿತು. ಇರಾನ್ ನ ಮೀನುಗಾರಿಕಾ ಹಡಗಿಗೆ ಕಡಲ್ಗಳ್ಳರು ಹತ್ತಿದ್ದರು ಹಾಗೂ ಸಿಬ್ಬಂದಿಯನ್ನು ಒತ್ತೆ ಸೆರೆ ಇರಿಸಿದ್ದರು’’ ಎಂದು ನೌಕಾ ಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ತಿಳಿಸಿದ್ದಾರೆ.
ಐಎನ್ಎಸ್ ಸುಮಿತ್ರಾ ಮೀನುಗಾರಿಕೆ ಹಡಗನ್ನು ತಡೆ ಹಿಡಿಯಿತು ಹಾಗೂ ಹಡಗಿನೊಂದಿಗೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಕಡಲ್ಗಳ್ಳರನ್ನು ಒತ್ತಾಯಿಸಲು ಪ್ರಮಾಣಿತ ಕಾರ್ಯ ವಿಧಾನಗಳಿಗೆ ಅನುಗುಣವಾಗಿ ಕಾರ್ಯಾಚರಣೆ ನಡೆಸಿತು. ಅಲ್ಲದೆ, ಹಡಗಿನೊಂದಿಗೆ ಅದರಲ್ಲಿದ್ದ ಎಲ್ಲಾ 17 ಸಿಬ್ಬಂದಿಯನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿತು ಅವರು ತಿಳಿಸಿದ್ದಾರೆ.
ಅನಂತರ ಇರಾನ್ ನ ಮೀನುಗಾರಿಕಾ ಹಡಗಿನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು ಹಾಗೂ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.







