ನೀಟ್ ಹಗರಣ | ತನಿಖೆಗೆ ಪಾಟ್ನಾಕ್ಕೆ ಆಗಮಿಸಿದ ಸಿಬಿಐ

CBI
ಪಾಟ್ನಾ : ನೀಟ್ ಪರೀಕ್ಷೆಯ ಅಕ್ರಮ ಆರೋಪದ ಕುರಿತ ತನಿಖೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಸಿಬಿಐಗೆ ಹಸ್ತಾಂತರಿಸಿದ ಬಳಿಕ ಸಿಬಿಐ ಅಧಿಕಾರಿಗಳು ಸೋಮವಾರ ಬೆಳಗ್ಗೆ ಬಿಹಾರದ ಪಾಟ್ನಾಕ್ಕೆ ಆಗಮಿಸಿದ್ದಾರೆ.
ಪ್ರಕರಣವನ್ನು ಬಿಹಾರ ಪೊಲೀಸ್ನ ಆರ್ಥಿಕ ಅಪರಾಧ ಘಟಕ (ಆಒಯು) ತನಿಖೆ ನಡೆಯುತ್ತಿದೆ. ಪ್ರಕರಣದೊಂದಿಗೆ ನಂಟು ಹೊಂದಿದ 18 ಮಂದಿಯನ್ನು ಇಒಯು ಬಂಧಿಸಿದೆ. ಇವರೆಲ್ಲರನ್ನೂ ವಿಚಾರಣೆಗಾಗಿ ಸಿಬಿಐಗೆ ಹಸ್ತಾಂತರಿಸಲಾಗಿದೆ. ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ಇಒಯುನಿಂದ ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಒಯು ಸಂಗ್ರಹಿಸಿದ ಪುರಾವೆಗಳಲ್ಲಿ ಬಿಹಾರದ ಮನೆಯೊಂದರಲ್ಲಿ ಪತ್ತೆಯಾದ ಸುಟ್ಟ ಪ್ರಶ್ನೆ ಪತ್ರಿಕೆಯ ತುಂಡು, ಬಂಧಿತರಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್ಗಲು, ಸಿಮ್ ಕಾರ್ಡ್, ಲ್ಯಾಪ್ಟಾಪ್, ಮುಂದಿನ ದಿನಾಂಕದ ಚೆಕ್, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಒದಗಿಸಿದ ಶಿಫಾರಸು ಮಾಡಲಾದ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
18 ಆರೋಪಿಗಳ ವಿಸ್ತೃತ ತನಿಖೆಗಾಗಿ ಟ್ರಾನ್ಸಿಟ್ ರಿಮಾಂಡ್ ಮೂಲಕ ಪಾಟ್ನಾ ನ್ಯಾಯಾಲಯದಿಂದ ದಿಲ್ಲಿಗೆ ಕರೆದುಕೊಂಡು ಹೋಗಲಾಗಿದೆ. ಕಸ್ಟಡಿಯಲ್ಲಿರುವವರಲ್ಲಿ ದಾನಾಪುರ ಪುರ ಸಭೆಯ ಕಿರಿಯ ಎಂಜಿನಿಯರ್ ಸಿಕಂದರ್ ಪ್ರಸಾದ್ ಯದುವೇಂದು ಅಕ್ರಮ ಆಸ್ತಿಯ ಹೆಚ್ಚುವರಿ ಆರೋಪವನ್ನು ಎದುರಿಸುವ ಸಾಧ್ಯತೆ ಇದೆ. ಯಾಕೆಂದರೆ, ಅವರು ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರುವುದು ಪತ್ತೆಯಾಗಿದೆ.







