ಲಡಾಖ್ಗೆ ನೂತನ ಎಲ್ ಜಿ, ಹರ್ಯಾಣ, ಗೋವಾಕ್ಕೆ ಹೊಸ ರಾಜ್ಯಪಾಲರ ನೇಮಕ

ರಾಷ್ಟ್ರಪತಿ ದ್ರೌಪದಿ ಮುರ್ಮು | PC : PTI
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಪ್ರೊ.ಆಶಿಮಕುಮಾರ್ ಘೋಷ್ ಅವರನ್ನು ಹರ್ಯಾಣದ ಮತ್ತು ಪುಸಪತಿ ಅಶೋಕ ಗಜಪತಿ ರಾಜು ಅವರನ್ನು ಗೋವಾದ ರಾಜ್ಯಪಾಲರನ್ನಾಗಿ ಹಾಗೂ ಕವಿಂದರ್ ಗುಪ್ತಾ ಅವರನ್ನು ಲಡಾಖ್ನ ಉಪ ರಾಜ್ಯಪಾಲ (ಎಲ್ಜಿ)ರನ್ನಾಗಿ ನೇಮಕಗೊಳಿಸಿದ್ದಾರೆ. ಈ ಕುರಿತು ರಾಷ್ಟ್ರಪತಿ ಭವನವು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಎಲ್ ಜಿ ಹುದ್ದೆಗೆ ಬ್ರಿ(ನಿವೃತ್ತ).ಬಿ.ಡಿ.ಮಿಶ್ರಾರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದು, ಅವಿಭಜಿತ ಜಮ್ಮುಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ಕವಿಂದರ್ ಗುಪ್ತಾ ಅವರು ನೂತನ ಎಲ್ ಜಿ ಯಾಗಲಿದ್ದಾರೆ.
2021ರಿಂದ ಹರ್ಯಾಣದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಬಂಡಾರು ದತ್ತಾತ್ರೇಯ ಅವರ ಸ್ಥಾನವನ್ನು ಪ್ರೊ.ಘೋಷ್ ವಹಿಸಿಕೊಳ್ಳಲಿದ್ದಾರೆ.
ಗಜಪತಿ ರಾಜು ಅವರು 2021ರಿಂದ ಗೋವಾದ ರಾಜ್ಯಪಾಲರಾಗಿರುವ ಪಿ.ಎಸ್.ಸುರೇಂದ್ರನ್ ಪಿಳ್ಳೈ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
Next Story





