ಹಾಲು, ಡೇರಿ ಉತ್ಪಾದನೆ ಹೆಚ್ಚಳಕ್ಕೆ ಹೊಸ ಯೋಜನೆ
ನಿರ್ಮಲಾ ಸೀತಾರಾಮನ್ | Photo: PTI
ಹೊಸದಿಲ್ಲಿ: ದೇಶದಲ್ಲಿ ಹಾಲು ಹಾಗೂ ಡೇರಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳನು ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಸಭೆಯಲ್ಲಿ ಮಂಡಿಸಿದ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಭಾರತವು ಜಗತ್ತಿನಲ್ಲೇ ಅತಿ ದೊಡ್ಡ ಹಾಲು ಉತ್ಪಾದಕ ದೇಶವಾಗಿದ್ದರೂ ಡೇರಿ ಉತ್ಪನ್ನಗಳ ಉತ್ಪಾದನೆಯಲ್ಲಿ ಅದು ಅತ್ಯಂತ ಹಿಂದಿದೆ ಎಂದು ವಿತ್ತ ಸಚಿವೆ ಹೇಳಿದರು. 2022-2023ನೇ ಸಾಲಿನಲ್ಲಿ ಭಾರತದಲ್ಲಿ ಹಾಲಿನ ಉತ್ಪಾದನೆ 230.58 ಮಿಲಿಯನ್ ಟನ್ ಗಳಿಗೆ ಹೆಚ್ಚಿದ್ದು, ಶೇ.4ರಷ್ಟು ಏರಿಕೆಯಾಗಿದೆ. ಎಣ್ಣೆಬೀಜಗಳ ಉತ್ಪಾದನೆಯಲ್ಲೂ ಆತ್ಮನಿರ್ಬರ (ಸ್ವಾವಲಂಬನೆ)ಯನ್ನು ಸಾದಿಸಲು ಕೂಡಾ ಕಾರ್ಯತಂತ್ರವೊಂದನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಕೃಷಿ ವಲಯದ ಮೌಲ್ಯವನ್ನು ಹೆಚ್ಚಿಸುವ ಜೊತೆಗೆ, ಕೃಷಿಕರ ಆದಾಯವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿಯೂ ಕ್ರಮಗಳನ್ನು ಕೈಗೊಳ್ಳಲಾಗುವುದ ಎಂದು ಸಚಿವರು ತಿಳಿಸಿದರು.
Next Story