ಹೊಸ ವರ್ಷಾಚರಣೆ ಮುನ್ನ ‘ಆಪರೇಶನ್ ಆಘಾತ್’: 285 ಬಂಧನ

ಸಾಂದರ್ಭಿಕ ಚಿತ್ರ | Photo Credit : freepik.com
500ಕ್ಕೂ ಅಧಿಕ ಮಂದಿ ಪೊಲೀಸ್ ವಶಕ್ಕೆ
ಹೊಸದಿಲ್ಲಿ, ಡಿ. 27: ಹೊಸ ವರ್ಷಾಚರಣೆಗೆ ಮುನ್ನ ದಿಲ್ಲಿ ಪೊಲೀಸರು ಶುಕ್ರವಾರ ‘ಆಪರೇಶನ್ ಆಘಾತ್ 3.0’ ಎಂಬ ಶೋಕಿ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಅಬಕಾರಿ ಕಾಯ್ದೆ, ಎನ್ಡಿಪಿಎಸ್ ಕಾಯ್ದೆ ಮತ್ತು ಜೂಜು ಕಾಯ್ದೆಯಡಿ 285 ಮಂದಿಯನ್ನು ಬಂಧಿಸಿದ್ದಾರೆ.
ಅದೇ ವೇಳೆ, ಮುನ್ನೆಚ್ಚರಿಕಾ ಕ್ರಮವಾಗಿ 500ಕ್ಕೂ ಅಧಿಕ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅದೂ ಅಲ್ಲದೆ, ‘‘ಕೆಟ್ಟ ನಡೆತೆಯವರು’’ ಎಂಬುದಾಗಿ ಗುರುತಿಸಲ್ಪಟ್ಟ 116 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಕಾರ್ಯಾಚರಣೆಯ ವೇಳೆ ಚೂರಿಗಳು, ಪಿಸ್ತೂಲುಗಳು, ಕಾಡತೂಸುಗಳು ಮತ್ತು ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಕಾನೂನು ಮತ್ತು ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಈ ಕಾರ್ಯಾಚರಣೆಯು ಮಹತ್ವದ ಕ್ರಮವಾಗಿದೆ ಎಂದು ಆಗ್ನೇಯ ದಿಲ್ಲಿ ಡಿಸಿಪಿ ಹೇಮಂತ್ ತಿವಾರಿ ಹೇಳಿದರು.
Next Story





