ಅಟಲ್ ಸೇತುವಿನಿಂದ ಸಮುದ್ರಕ್ಕೆ ಆಯ ತಪ್ಪಿ ಬೀಳಲಿದ್ದ ಮಹಿಳೆಯನ್ನು ರಕ್ಷಿಸಿದ ಟ್ಯಾಕ್ಸಿ ಚಾಲಕ, ಟ್ರಾಫಿಕ್ ಪೊಲೀಸರು
ವಿಡಿಯೋ ವೈರಲ್

Image Credit: NDTV
ಮುಂಬೈ: ಅಟಲ್ ಸೇತುವೆ ಮೇಲಿಂದ ಅರಬ್ಬೀ ಸಮುದ್ರಕ್ಕೆ ಬೀಳಲಿದ್ದ 56 ವರ್ಷದ ಮಹಿಳೆಯೊಬ್ಬರ ಜೀವವನ್ನು ಟ್ಯಾಕ್ಸಿ ಚಾಲಕರೊಬ್ಬರು ಹಾಗು ನಾಲ್ಕು ಮಂದಿ ಟ್ರಾಫಿಕ್ ಪೊಲೀಸರು ದಿಟ್ಟ ಕಾರ್ಯಾಚರಣೆ ಮತ್ತು ಪ್ರಸಂಗಾವಧಾನತೆಯಿಂದಾಗಿ ಉಳಿಸಿದ ಘಟನೆ ಶುಕ್ರವಾರ ವರದಿಯಾಗಿದೆ.
ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಮುಲುಂದ್ ನಿವಾಸಿ ರೀಮಾ ಮುಕೇಶ್ ಪಟೇಲ್ ಅವರು ಅಟಲ್ ಸೇತುವಿಗೆ ಟ್ಯಾಕ್ಸಿ ಒಂದರಲ್ಲಿ ಆಗಮಿಸಿ ನವ ಶೇವಾ ಬದಿಯಲ್ಲಿ ವಾಹನ ನಿಲ್ಲಿಸುವಂತೆ ಸೂಚಿಸಿದ್ದರು. ನಂತರ ಸೇತುವೆ ಬದಿಗೆ ತೆರಳಿದ ಅವರು ಅಲ್ಲಿನ ರೈಲಿಂಗ್ನಲ್ಲಿ ಕುಳಿತಿದ್ದರು. ಆ ಸಂದರ್ಭ ಅದೇ ಹಾದಿಯಲ್ಲಿ ಪೊಲೀಸ್ ಗಸ್ತು ವಾಹನ ತೆರಳುತ್ತಿದ್ದುದನ್ನು ಗಮನಿಸಿದ ಮಹಿಳೆ ಆಯತಪ್ಪಿ ಇನ್ನೇನು ಬೀಳಲಿದ್ದಾರೆನ್ನುವಾಗ ಟ್ಯಾಕ್ಸಿ ಚಾಲಕ ತಕ್ಷಣ ಆಕೆಯ ಕೂದಲು ಹಿಡಿದು ಮೇಲಕ್ಕೆತ್ತುವ ಯತ್ನ ನಡೆಸಿದ್ದರು. ತಕ್ಷಣ ನಾಲ್ಕು ಟ್ರಾಫಿಕ್ ಪೊಲೀಸರು ರೈಲಿಂಗ್ ಮೇಲೆ ಹತ್ತಿ ಆಕೆಯನ್ನು ಹಿಡಿದು ಮೇಲಕ್ಕೆತ್ತಿದ್ದಾರೆ.
ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Taxi driver saves woman from jumping off Atal Setu bridge in #Mumbai
— The Times Of India (@timesofindia) August 17, 2024
Read here https://t.co/viFnTmF2sc pic.twitter.com/JrFh2nH2Oc