ದಿಲ್ಲಿಯ ಸೀಲಾಂಪುರದಲ್ಲಿ ಹೋಳಿ ಆಚರಣೆಯಲ್ಲಿ ಮುಸ್ಲಿಮರ ಮೇಲೆ ಹೂವಿನ ಸುರಿಮಳೆ ; ವೀಡಿಯೊ ವೈರಲ್

Screengrab: X
ಹೊಸದಿಲ್ಲಿ: ಈ ವರ್ಷದ ಹೋಳಿ ಶುಕ್ರವಾರದ ಜುಮಾ ನಮಾಝ್ ದಿನವೇ ಬಂದಿದ್ದರಿಂದ ಸೂಕ್ಷ್ಮತೆ ಕಾಪಾಡುವ ಕಳವಳದ ನಡುವೆ ದಿಲ್ಲಿಯ ಸೀಲಾಂಪುರವು ದೇಶಕ್ಕೆ ಕೋಮು ಸೌಹಾರ್ದತೆಯ ಪಾಠ ಸಾರಿದೆ.
ದಿಲ್ಲಿಯ ಸೀಲಾಂಪುರ ನಿವಾಸಿಗಳು ಜಾಮಾ ಮಸೀದಿ ಬಳಿ ಮುಸ್ಲಿಮರು ಜುಮಾ ನಮಾಝ್ ನಿರ್ವಹಿಸಲು ಬರುತ್ತಿದ್ದಂತೆ ಬಣ್ಣ ಎರಚದೇ ಅವರ ಮೇಲೆ ಪುಷ್ಪಾರ್ಚನೆ ಮಾಡಿ ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ವೀಡಿಯೊದಲ್ಲಿ ಬಿಳಿ ವಸ್ತ್ರಧಾರಿ ಮುಸ್ಲಿಮರ ಮೇಲೆ ಹೋಳಿಯ ಬಣ್ಣದ ಓಕುಳಿಯಲ್ಲಿ ಆಟವಾಡುತ್ತಿದ್ದ ಜನರು ಪುಷ್ಪವೃಷ್ಠಿ ಮಾಡುತ್ತಿರುವುದು ಸೆರೆಯಾಗಿದೆ.
ಹೆಚ್ಚುತ್ತಿರುವ ಸಾಮಾಜಿಕ ವಿಭಜನೆಗಳ ನಡುವೆ ಇಂತಹ ಸದ್ಭಾವನೆಯ ಕಾರ್ಯಗಳು ಸಹಬಾಳ್ವೆ ಮತ್ತು ಸಾಮರಸ್ಯವನ್ನು ಹಂಚುವ ಕೆಲ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
Delhi's Seelampur where Hindu brothers celebrated Holi by showering flowers on Namazis.#HoliCelebration pic.twitter.com/3QTQHCnjQD
— هارون خان (@iamharunkhan) March 14, 2025







