ಕೇರಳಕ್ಕೆ ನಿಫಾ ನಿರೋಧಕ ಲಸಿಕೆ

Photo: PTI
ತಿರುವನಂತಪುರ: ನಿಫಾ ವೈರಸ್ ಸೋಂಕಿಗೆ ಒಳಗಾಗಿರುವವರ ಚಿಕಿತ್ಸೆಗೆ ಅಗತ್ಯವಾಗಿರುವ ಲಸಿಕೆ (ಮೋನೋಕ್ಲೋನಲ್ ಆ್ಯಂಟಿಬಡಿ)ರಾಜ್ಯಕ್ಕೆ ತಲುಪಿದೆ ಎಂದು ಕೇರಳ ಸರಕಾರ ಗುರುವಾರ ತಿಳಿಸಿದೆ. ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ನಡುವೆ ಸಭೆ ನಡೆದಿದೆ.
ಈಗ ನಿಫಾ ನಿರೋಧಕ ಲಸಿಕೆ ರಾಜ್ಯಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಈ ಲಸಿಕೆ ವೈದ್ಯಕೀಯವಾಗಿ ಇದುವರೆಗೆ ಸಾಬೀತಾಗಿಲ್ಲ. ಆದರೆ, ನಿಫಾ ವೈರಸ್ ಸೋಂಕಿಗೆ ಲಭ್ಯವಿರುವ ಈ ಏಕೈಕ ಲಸಿಕೆಯ ಸಾಮರ್ಥ್ಯದ ಬಗ್ಗೆ ಕೇಂದ್ರದ ತಜ್ಞರ ಸಮಿತಿಯೊಂದಿಗೆ ಚರ್ಚಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.
Next Story





