ಜಾತ್ಯಾತೀತತೆ ಭಾರತದ ಸಂಸ್ಕೃತಿಯಲ್ಲ, ಸಮಾಜವಾದ ನಮಗೆ ಅಗತ್ಯವಿಲ್ಲ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಶಿವರಾಜ್ ಸಿಂಗ್ ಚೌಹಾಣ್ (Photo: PTI)
ಹೊಸದಿಲ್ಲಿ: ಜಾತ್ಯಾತೀತತೆ ಮತ್ತು ಸಮಾಜವಾದ ಭಾರತದ ಸಂಸ್ಕೃತಿಯಲ್ಲ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಸಂವಿಧಾನದ ಪೀಠಿಕೆಯಿಂದ ಸಮಾಜವಾದ ಹಾಗೂ ಜಾತ್ಯಾತೀತ ಪದವನ್ನು ಕಿತ್ತು ಹಾಕಲು ಆರೆಸ್ಸೆಸ್ ನ ದತ್ತಾತ್ರೇಯ ಹೊಸಬಾಳೆ ಹೇಳಿಕೆ ನೀಡಿದ ಬೆನ್ನಲ್ಲೇ ಚೌಹಾಣ್ ಈ ಮಾತನ್ನು ಹೇಳಿದ್ದಾರೆ.
ಭಾರತದಲ್ಲಿ ಸಮಾಜವಾದದ ಅಗತ್ಯವಿಲ್ಲ. ಜಾತ್ಯಾತೀತತೆ ನಮ್ಮ ದೇಶದ ಸಂಸ್ಕೃತಿಯೂ ಅಲ್ಲ. ಈ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.
ತುರ್ತು ಪರಿಸ್ಥಿತಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಯಾವುದೇ ಆಂತರಿಕ, ಬಾಹ್ಯ ಬೆದರಿಕೆಗಳು ಇರಲಿಲ್ಲ, ಆದರೆ ಪ್ರಧಾನಿ ಕುರ್ಚಿಗೆ ಬೆದರಿಕೆ ಇತ್ತು. ಹಾಗಾಗಿ, ಸಂಪುಟ ಸಭೆಯನ್ನೂ ನಡೆಸದೆ ಏಕಾಏಕಿ ತುರ್ತುಸ್ಥಿತಿ ಘೋಷಿಸಲಾಯಿತು ಎಂದೂ ಅವರು ಹೇಳಿದರು.
Next Story





