ನೋಕಿಯಾದಿಂದ 14 ಸಾವಿರ ಉದ್ಯೋಗ ಕಡಿತ: ವೆಚ್ಚ ತಗ್ಗಿಸಲು ಕಂಪೆನಿಯ ನಿರ್ಧಾರ

ಎಸ್ಪೋ(ಫಿನ್ಲ್ಯಾಂಡ್): ಮೂರನೇ ತ್ರೈಮಾಸಿಕದಲ್ಲಿ 5ಜಿ ಸಾಧನಗಳನ್ನೂ ಒಳಗೊಂಡು ಒಟ್ಟು ಮಾರಾಟದಲ್ಲಿ ಇಳಿಕೆ ಕಂಡುಬಂದಿರುವುದರಿಂದ ಕಂಪನಿಯು ವೆಚ್ಚ ಕಡಿಮೆ ಮಾಡಿಕೊಳ್ಳುವ ಪ್ರಯತ್ನದ ಭಾಗವಾಗಿ 14 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ನೋಕಿಯಾ ಗುರುವಾರ ಹೇಳಿದೆ.
ವೆಚ್ಚ ತಗ್ಗಿಸಲು ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಕಂಪನಿಯು ವೆಚ್ಚವನ್ನು 2026ರ ಒಳಗೆ ರೂ.6,988 ಕೋಟಿಯಿಂದ ರೂ 9,960 ಕೋಟಿಗೆ ತಗ್ಗಿಸುವ ಗುರಿ ಇಟ್ಟುಕೊಂಡಿದೆ.
ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಮಾರಾಟ ರೂ.54,912 ಕೋಟಿಯಿಂದ ರೂ.43,824 ಕೋಟಿಗೆ ಇಳಿಕೆ ಕಂಡಿದೆ.
Next Story





