ಒಡಿಶಾ ಸ್ಮಶಾನದಲ್ಲಿ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆ

ಸಾಂದರ್ಭಿಕ ಚಿತ್ರ | PC ; newindianexpress.com
ಭುವನೇಶ್ವರ,ಜು.26: ರಾಜ್ಯದ ಭದ್ರಕ್ ಜಿಲ್ಲೆಯ ಮನಿನಾಥಪುರದ ಸ್ಮಶಾನವೊಂದರಲ್ಲಿ ಹೂಳಲಾ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆಯಾಗಿರುವ ನಿಗೂಢ ಪ್ರಕರಣಕ್ಕೆ ಸಂಬಂಧಿಸಿ ಒಡಿಶಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಮೃತರಾದ ನಾಲ್ಕು ಮಂದಿಯ ಶವಗಳು ಕಾಣೆಯಾಗಿವೆಯೆಂದು ಸ್ಥಳೀಯರು ಆಪಾದಿಸಿದ ಬಳಿಕ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದರು.
ಈ ನಾಪತ್ತೆಯಾದ ಮೃತದೇಹಗಳು ಲಕ್ಷ್ಮಿಪ್ರಿಯಾ ಬೆಹೆರಾ, ಸತ್ಯಭಾಮಾ ಪರಿಡಾ, ಶತ್ರುಘ್ನದಾಸ್ ಹಾಗೂ ಪ್ರಮೀಳಾ ದಾಸ್ ಅವರದ್ದೆಂದು ಪೊಲೀಸರು ಗುರುತಿಸಿರುವುದಾಗಿ ಸ್ಥಳೀಯ ಟಿವಿ ವಾಹಿನಿಯೊಂದು ವರದಿ ಮಾಡಿದೆ.
ಸಮಾಧಿಗಳಿಂದ ಮೃತದೇಹಗಳು ನಾಪತ್ತೆಯಾಗಿರುವುದು ಇದೇ ಮೊದಲ ಸಲವಲ್ಲವೆಂದು ಗ್ರಾಮಸ್ಥರು ಹೇಳಿದ್ದಾರೆ. 2017ರಿಂದೀಚೆಗೆ ಸುಮಾರು 15 ಮೃತದೇಹಗಳು ಕಣ್ಮರೆಯಾಗಿರುವುದಾಗಿ ಅವರು ಹೇಳಿದ್ದಾರೆ.
ಈ ಘಟನೆಗಳ ಹಿಂದೆ ಅಂತಾರಾಷ್ಟ್ರೀಯ ಅಂಗಾಂಗ ಕಳ್ಳಸಾಗಣೆ ಜಾಲ ಶಾಮೀಲಾಗಿರುವ ಶಂಕೆಯಿದ್ದು, ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಹಲವಾರು ದೂರುಗಳನ್ನು ಸಲ್ಲಿಸಿದ್ದರೂ, ತನಿಖೆಯಲ್ಲಿ ಯಾವುದೇ ಪ್ರಗತಿಯುಂಟಾಗಿಲ್ಲವೆಂದು ಗ್ರಾಮಸ್ಥರು ಆಪಾದಿಸಿದ್ದಾರೆ. ಭಂಡಾರಿಪೋಖಾರಿ ಪೊಲೀಸ್ ಠಾಣೆಯ ಉಸ್ತುವಾರಿ ನಿರೀಕ್ಷಕ ಕಮಲಾಕಾಂತ್ ನಾಯಕ್ ಹೇಳಿದ್ದಾರೆ. ಈ ದೂರುಗಳ ಬಗ್ಗೆ ತನಿಖೆಯನ್ನು ಆರಂಭಿಸುವುದಾಗಿ ಹೇಳಿದ್ದಾರೆ.







