ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್ ಹರಿದು ಅಧಿಕಾರಿ ಮೃತ್ಯು

ಸಾಂದರ್ಭಿಕ ಚಿತ್ರ
ಶಾಹದೋಲ್: ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ನ್ನು ಮೈಮೇಲೆಯೇ ಚಲಾಯಿಸಿದ ಪರಿಣಾಮ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ನಡೆದಿದೆ.
ಪ್ರಸನ್ನ ಸಿಂಗ್ ಮೃತ ಅಧಿಕಾರಿಯಾಗಿದ್ದು, ಬೊಹರಿ ತಾಲೂಕಿನ ಖಡ್ಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಮಧ್ಯರಾತ್ರಿ ವೇಳಗೆ ಗಸ್ತುನಿರತ ಸರಕಾರಿ ಅಧಿಕಾರಿಗಳ ತಂಡದಲ್ಲಿದ್ದ ಸಿಂಗ್ ಗೋಪಾಲಪುರ ಪ್ರದೇಶದ ಸೋನ್ ನದಿಯಿಂದ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ ಚಾಲಕ ಅವರ ಮೇಲೆಯೇ ಟ್ರ್ಯಾಕ್ಟರ್ ಚಲಾಯಿಸಿದ್ದ ಎಂದು ಪೋಲಿಸರು ತಿಳಿಸಿದರು.
ಘಟನೆಯ ಬಳಿಕ ಟ್ರ್ಯಾಕ್ಟರ್ನೊಂದಿಗೆ ಪರಾರಿಯಾಗಿದ್ದ ಚಾಲಕ ಶುಭಂ ವಿಶ್ವಕರ್ಮ (25)ನನ್ನು ನಂತರ ಬಂಧಿಸಲಾಗಿದ್ದು,ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
Next Story





