ಜೂ.4ರಂದು ‘ಇಂಡಿಯಾ’ ಮೈತ್ರಿಕೂಟವು ಸಿಹಿ ಗೆಲುವನ್ನು ನೀಡಲಿದೆ: ಎಂ. ಕೆ. ಸ್ಟಾಲಿನ್

PC : X \ @INCIndia
ಚೆನ್ನೈ: ‘ಇಂಡಿಯಾ’ ಮೈತ್ರಿಕೂಟವು ಜೂ.4ರಂದು ಸಿಹಿ ಗೆಲುವನ್ನು ನೀಡಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ. ಕೆ. ಸ್ಟಾಲಿನ್ ಅವರು ಶನಿವಾರ ಹೇಳಿದ್ದಾರೆ.
ಶುಕ್ರವಾರ ಕೊಯಿಮತ್ತೂರಿನಲ್ಲಿ ಸ್ಟಾಲಿನ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಜೊತೆಯಾಗಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಹುಲ್ ಅವರಿಂದ ಮೈಸೂರು ಪಾಕ್ನ್ನು ಸ್ವೀಕರಿಸಿದ್ದ ಸ್ಟಾಲಿನ್ ,ತನ್ನ ಸಹೋದರನ ಸಿಹಿ ವರ್ತನೆ ತನಗೆ ಖುಷಿ ನೀಡಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಕೊಯಿಮತ್ತೂರಿನಲ್ಲಿ ತನಗಾಗಿ ಮೈಸೂರು ಪಾಕ್ ಖರೀದಿಸಲು ರಾಹುಲ್ ರಸ್ತೆ ವಿಭಜಕವನ್ನು ಹಾರಿ ತ್ವರಿತವಾಗಿ ರಸ್ತೆಯನ್ನು ದಾಟಿ ಸಿಹಿತಿಂಡಿಗಳ ಅಂಗಡಿಗೆ ತೆರಳುತ್ತಿದ್ದ ವೀಡಿಯೊವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸ್ಟ್ಯಾಲಿನ್, ಅವರ ಪ್ರೀತಿಯ ನಡವಳಿಕೆ ನನ್ನ ಮನಸ್ಸನ್ನು ತಟ್ಟಿದೆ ಎಂದು ಬರೆದಿದ್ದಾರೆ.
ಜೂ.4ರಂದು ಇಂಡಿಯಾ ಮೈತ್ರಿಕೂಟವು ಖಂಡಿತವಾಗಿಯೂ ರಾಹುಲ್ ಅವರಿಗೆ ಸಿಹಿ ಗೆಲುವನ್ನು ನೀಡಲಿದೆ ಎಂದು ಸ್ಟಾಲಿನ್ ತನ್ನ ಪೋಸ್ಟ್ನಲ್ಲಿ ಬರೆದಿದ್ದಾರೆ.
Shri @RahulGandhi gifts famous Mysore Pak to Shri @mkstalin.
— Congress (@INCIndia) April 12, 2024
Celebrating the loving relationship he shares with the people of Tamil Nadu. pic.twitter.com/Lw8vYrCC8L







