‘ಒಂದು ದೇಶ, ಒಂದು ಚುನಾವಣೆ’ ಮಸೂದೆ | ಪರಿಶೀಲನಾ ಸಮಿತಿಯ ಅಧಿಕಾರಾವಧಿ ವಿಸ್ತರಣೆ

Photo Credit : PTI
ಹೊಸದಿಲ್ಲಿ, ಡಿ. 11: ಲೋಕಸಭೆ ಹಾಗೂ ವಿಧಾನಸಭೆಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವುದನ್ನು ಪರಿಚಯಿಸಲು ಕೋರುವ ಮಸೂದೆಯನ್ನು ಪರಿಶೀಲಿಸುವ ಸಂಸದೀಯ ಸಮಿತಿಯ ಅಧಿಕಾರಾವಧಿಯನ್ನು ಲೋಕಸಭೆ ಗುರುವಾರ ವಿಸ್ತರಿಸಿದೆ.
2026ರ ಬಜೆಟ್ ಅಧಿವೇಶನದ ಕೊನೆಯ ವಾರದ ಮೊದಲ ದಿನದ ವರೆಗೆ ಸಾಂವಿಧಾನಿಕ (129ನೇ ತಿದ್ದುಪಡಿ) ಮಸೂದೆ, 2024 ಹಾಗೂ ಕೇಂದ್ರಾಡಾಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಮಿತಿ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರುವ ನಿರ್ಣಯವನ್ನು ಸಮಿತಿಯ ಅಧ್ಯಕ್ಷರಾದ ಪಿ.ಪಿ. ಚೌಧರಿ ಮಂಡಿಸಿದರು.
ಈ ನಿರ್ಣಯವನ್ನು ಲೋಕಸಭೆ ಧ್ವನಿ ಮತದ ಮೂಲಕ ಅಂಗೀಕರಿಸಿತು.
ಕಳೆದ ಡಿಸೆಂಬರ್ನಲ್ಲಿ ರೂಪುಗೊಂಡ ಬಳಿಕ ಈ ಸಮಿತಿ ಸಂವಿಧಾನ ಪರಿಣತರು, ಅರ್ಥಶಾಸ್ತ್ರಜ್ಞರು, ಕಾನೂನು ಆಯೋಗದ ಅಧ್ಯಕ್ಷ ದಿನೇಶ್ ಮಹೇಶ್ವರಿ ಹಾಗೂ ಇತರರನ್ನು ಭೇಟಿಯಾಗಿದೆ.
Next Story





