ಕೇರಳ | ‘ಶವರ್ಮಾ ತಿಂದ ನಂತರ ಹಿಂದೂಗಳು ಮಾತ್ರ ಸಾಯುತ್ತಾರೆ’ : ಆರೆಸ್ಸೆಸ್ ನಿಯತಕಾಲಿಕೆಯ ಸಂಪಾದಕರ ದ್ವೇಷ ಭಾಷಣ
ʼವರ್ಮʼ ಜಾತಿಯನ್ನು ಶವರ್ಮಾದೊಂದಿಗೆ ಜೋಡಿಸಿ ʼಶವ ವರ್ಮʼ ಎಂದ ಆರೆಸ್ಸೆಸ್ ನಾಯಕ!

ಆರ್ಎನ್ ಮಧು | PC : thenewsminute.com
ತಿರುವನಂತರಪುರಂ : ‘ಶವರ್ಮಾ ತಿಂದ ನಂತರ ಹಿಂದೂಗಳು ಮಾತ್ರ ಸಾಯುತ್ತಾರೆ’ ಎಂದು ಕೇರಳದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖವಾಣಿ ಪತ್ರಿಕೆ ಕೇಸರಿಯ ಪ್ರಧಾನ ಸಂಪಾದಕ ಆರ್ಎನ್ ಮಧು ಹೇಳಿಕೆ ನೀಡಿದ್ದಾರೆ. ಅವರ ದ್ವೇಷ ಭಾಷಣಕ್ಕೆ ಕೇರಳದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮೇ 13 ರಂದು ಮಂಗಳವಾರ ಕೊಲ್ಲಂನಲ್ಲಿ ನಡೆದ ದೇವಾಲಯ ಕಾರ್ಯಕ್ರಮವೊಂದರಲ್ಲಿ ಮಾಡಿದ್ದ ದ್ವೇಷ ಭಾಷಣಕ್ಕೆ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಭಾಷಣದಲ್ಲಿ, ಶವರ್ಮಾ ತಿಂದ ನಂತರ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಯಾರೂ ಸಾಯುವುದಿಲ್ಲ. ಕೇವಲ ಹಿಂದೂಗಳು ಮಾತ್ರ ಶವರ್ಮಾ ತಿಂದ ನಂತರ ಸಾಯುತ್ತಿದ್ದಾರೆ”, ಎಂದು ಮಧು ಹೇಳಿದ್ದಾರೆ.
ಹಿಂದೂಗಳ ಎಂದು ಹೇಳುವಾಗ, ಅವರು ಕೇರಳದಲ್ಲಿ ವಿಶೇಷ ಗುಂಪಾಗಿ ಪರಿಗಣಿಸಲಾದ ‘ವರ್ಮ’ ಜಾತಿಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ.
“ನಾವು ‘ಶವ ವರ್ಮಾ’ ತಿನ್ನುತ್ತೇವೆ - ಅಂದರೆ ವರ್ಮಾ ಮೃತದೇಹಗಳನ್ನು ತಿನ್ನುತ್ತಾರೆ. ಅದಕ್ಕಾಗಿಯೇ ಇದನ್ನು ‘ಶವ ವರ್ಮಾ’ ಎಂದು ಕರೆಯಲಾಗುತ್ತದೆ,” ಎಂದು ಮಧು ಅವರು ಶವರ್ಮಾಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ.
‘ವರ್ಮಾ’ ಜಾತಿಯ ಹೆಸರನ್ನು ‘ಶವ’ ದೊಂದಿಗೆ ಜೋಡಿಸುವ ಮೂಲಕ ಶವ ವರ್ಮ ಎಂದು ಅವರು ವ್ಯಂಗ್ಯವಾಡಿದ್ದಾರೆ. “ಕೇರಳದಲ್ಲಿ ಶವರ್ಮಾ ಸೇವಿಸಿದ ನಂತರ ಅನೇಕ ಜನರು ಸಾವನ್ನಪ್ಪಿದ್ದಾರೆ. ಈ ಪಟ್ಟಿಯಲ್ಲಿ ಮುಹಮ್ಮದ್, ಆಯಿಷಾ ಅಥವಾ ಥಾಮಸ್ ಇಲ್ಲ - ವರ್ಮಾ ಮಾತ್ರ ಇರುವುದು”, ಎಂದು ಅವರು ದ್ವೇಷ ಭಾಷಣ ಮಾಡಿದ್ದಾರೆ.
ಹೆಚ್ಚುತ್ತಿರುವ ಅರೇಬಿಯದ ಆಹಾರದ ಸಂಸ್ಕೃತಿಯ ಜನಪ್ರಿಯತೆಯನ್ನು ಟೀಕಿಸಿದ ಆರೆಸ್ಸೆಸ್ ನ ಮಧು, ಮಾಂಸಾಹಾರಿ ಭಕ್ಷ್ಯಗಳು ನಕಾರಾತ್ಮಕ ಸಾಂಸ್ಕೃತಿಕ ಪ್ರಭಾವವಾಗಿದೆ ಎಂದು ಆರೋಪಿಸಿದ್ದಾರೆ..
"ಈಗ, ಜನರನ್ನು ತೃಪ್ತಿಪಡಿಸುವ ಆಹಾರವೆಂದರೆ ಅರೇಬಿಯನ್ ಆಹಾರ. ನಗರಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲಿಯೂ ಜನರು ತಡರಾತ್ರಿಯಲ್ಲಿ ಅದನ್ನು ತಿನ್ನಲು ಪ್ರಾರಂಭಿಸಿದ್ದಾರೆ. ನಾವು ಸಂಜೆ ಬೀದಿಗಳಲ್ಲಿ ನಡೆಯುವಾಗ, ನಮ್ಮ ಮೂಗಿನ ಹೊಳ್ಳೆಗಳು ಸುಟ್ಟ ಮಾಂಸದ ವಾಸನೆಯಿಂದ ತುಂಬಿರುತ್ತವೆ. ಆ ನಡಿಗೆಯು ಸ್ಮಶಾನದ ಮೂಲಕ ನಡೆಯುವಂತೆ ಭಾಸವಾಗುತ್ತದೆ" ಎಂದು ಅವರು ಕಿಡಿ ಕಾರಿದ್ದಾರೆ.
ಹಾಗಂತ ಜನರು ಮಾಂಸ ತಿನ್ನುವುದನ್ನು ತಪ್ಪಿಸಬೇಕೆಂದು ತಾನು ಒತ್ತಾಯಿಸುತ್ತಿಲ್ಲ ಎಂದು ಮಧು ಸಮಜಾಯಿಷಿ ನೀಡಿದ್ದಾರೆ
ಕೇರಳ ಮೂಲದ ಜನಪ್ರಿಯ ರ್ಯಾಪರ್ ಮತ್ತು ಗೀತರಚನೆಕಾರ ವೇಡನ್ ಅವರ ಮೇಲೆ ಹರಿಹಾಯ್ದ ಮಧು, ವೇಡನ್ ಗೆ ಪ್ರಬಲ ಪ್ರಾಯೋಜಕರು ಬೆಂಬಲ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.
"ಈ ಶಕ್ತಿಗಳು ರಾಷ್ಟ್ರದ ವಿಭಜನೆಯ ಕನಸು ಕಾಣುತ್ತಿವೆ ಎಂಬುದು ಸ್ಪಷ್ಟವಾಗಿದೆ. ವೇಡನ್ ಅವರ ಸಂಗೀತವು ಜಾತಿ ಆಧಾರಿತ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಸಿದ್ಧಾಂತವನ್ನು ಉತ್ತೇಜಿಸುತ್ತಿದೆ. ವೇಡನ್ ಅವರು ಯುವ ಪೀಳಿಗೆಯ ಮನಸ್ಸಿನಲ್ಲಿ ವಿಷವನ್ನು ತುಂಬುತ್ತಿದ್ದಾರೆ", ಎಂದು ಮಧು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌಜನ್ಯ: thenewsminute.com