ಆಪರೇಷನ್ ಸಿಂಧೂರ್: ಉತ್ತರ ಭಾರತದಲ್ಲಿ ವೈಮಾನಿಕ ಸೇವೆ ಅಸ್ತವ್ಯಸ್ತ

PC: x.com/aveonews
ಹೊಸದಿಲ್ಲಿ: ಉತ್ತರ ಭಾರತದಲ್ಲಿ ವಾಯು ಪ್ರದೇಶ ಬದಲಾವಣೆಯಿಂದಾಗಿ ಹಲವು ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ಇಂಡಿಗೊ ಏರ್ ಲೈನ್ಸ್ ಬುಧವಾರ ಮುಂಜಾನೆ ಪ್ರಕಟಿಸಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತವು ಭಯೋತ್ಪಾದನೆ ನಿಗ್ರಹದ ಉದ್ದೇಶದಿಂದ ಪಾಕಿಸ್ತಾನದ ನಿಖರ ಗುರಿಗಳ ಮೇಲೆ ದಾಳಿ ಆರಂಭಿಸಿದ ಹಿನ್ನೆಲೆಯಲ್ಲಿ ವಾಯು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ.
ಶ್ರೀನಗರ, ಜಮ್ಮು, ಅಮೃತಸರ, ಲೆಹ್, ಚಂಡೀಗಢ, ಧರ್ಮಶಾಲಾ ಮತ್ತು ಬಿಕನೇರ್ನ ನಿಂದ ಕಾರ್ಯಾಚರಣೆ ನಡೆಸಬೇಕಿದ್ದ ವಿಮಾನಗಳ ಸಂಚಾರ ವಿಳಂಬವಾಗಿದೆ ಅಥವಾ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರದ್ದಾಗಿದೆ ಎಂದು ಇಂಡಿಗೊ ಏರ್ ಲೈನ್ಸ್ ಎಕ್ಸ್ ಪೋಸ್ಟ್ ನಲ್ಲಿ ದೃಢಪಡಿಸಿದೆ.
ಉತ್ತರ ಭಾರತದ ಪ್ರಸ್ತುತ ಸ್ಥಿತಿಯ ಹಿನ್ನೆಲೆಯಲ್ಲಿ ಶ್ರೀನಗರ, ಜಮ್ಮು, ಅಮೃತಸರ, ಲೆಹ್, ಚಂಡೀಗಢ, ಧರ್ಮಶಾಲಾ ಸೇರಿದಂತೆ ಉತ್ತರ ಭಾರತದ ವೈಮಾನಿಕ ಸೇವೆ ರದ್ದುಗೊಳಿಸಲಾಗಿದೆ ಎಂದು ಸ್ಪೈಸ್ ಜೆಟ್ ಸ್ಪಷ್ಟಪಡಿಸಿದೆ.
ಗಡಿಯಾಚೆಗಿನ ಯಾವುದೇ ಪ್ರತಿಕ್ರಿಯೆಗೆ ಸಜ್ಜಾಗಿರುವ ಭಾರತ ಗಡಿಪ್ರದೇಶದ ತನ್ನೆಲ್ಲ ರಕ್ಷಣಾ ಘಟಕಗಳಲ್ಲಿ ಕಟ್ಟೆಚ್ಚರ ವಹಿಸಿದ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.





