ಪಾಕಿಸ್ತಾನ ಸೇನಾ ಮುಖ್ಯಸ್ಥರಿಂದ ಭಾರತದ ಜಾಮ್ನಗರದ ರಿಲಯನ್ಸ್ ರಿಫೈನರಿ ಮೇಲೆ ಪರಮಾಣು ದಾಳಿ ಬೆದರಿಕೆ

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ (Photo credit: AP)
ಹೊಸದಿಲ್ಲಿ: ಭವಿಷ್ಯದಲ್ಲಿ ಭಾರತ-ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ಉಂಟಾದಲ್ಲಿ ಪರಮಾಣು ದಾಳಿ ನಡೆಸುವುದಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನೀಡಿದ ಬೆದರಿಕೆ ಹಾಕಿದ್ದಾರೆ. ಗುಜರಾತ್ನ ಜಾಮ್ ನಗರದಲ್ಲಿರುವ ವಿಶ್ವದ ಅತಿದೊಡ್ಡ ಏಕ-ಸ್ಥಳ ಸಂಸ್ಕರಣಾ ಸಂಕೀರ್ಣ — ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್)ನ ತೈಲ ಶುದ್ಧೀಕರಣ ಘಟಕವೇ ತಮ್ಮ ಗುರಿ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಫ್ಲೋರಿಡಾ ರಾಜ್ಯದ ಟ್ಯಾಂಪಾದಲ್ಲಿ ನಡೆದ ಔಪಚಾರಿಕ ಭೋಜನ ಕೂಟದಲ್ಲಿ ಮಾತನಾಡಿದ ಮುನೀರ್, ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷವನ್ನು ಉಲ್ಲೇಖಿಸಿ, “ಮುಂದಿನ ಬಾರಿ ನಾವು ಏನು ಮಾಡುತ್ತೇವೆ ಎಂಬುದನ್ನು ತೋರಿಸಲು” ಎಂಬ ಸಂದೇಶದೊಂದಿಗೆ ಆರ್ಐಎಲ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಚಿತ್ರ ಹಾಗೂ ಕುರ್ ಆನ್ ನ ಸೂಕ್ತವನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಭಾರತವು ತನ್ನ ಪ್ರಮುಖ ಆರ್ಥಿಕ ನೆಲೆಗಳಿಗೆ, ವಿಶೇಷವಾಗಿ ಗಡಿ ರಾಜ್ಯಗಳು ಹಾಗೂ ಪಾಕಿಸ್ತಾನದ ವಾಯುದಾಳಿಯ ವ್ಯಾಪ್ತಿಯಲ್ಲಿರುವ ಆಯಿಲ್ ರಿಫೈನರಿಗಳಿಗೆ ಬರುವ ಮಿಲಿಟರಿ ಬೆದರಿಕೆಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತದೆ. ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಿಂದ ಜಾಮ್ ನಗರ ರಿಫೈನರಿ ಸೇರಿ ಹಲವು ತೈಲ ಶುದ್ಧೀಕರಣ ಘಟಕಗಳಿಗೆ ದಾಳಿ ಬೆದರಿಕೆಗಳು ಹಿಂದೆಯೂ ನಡೆದಿವೆ.
ವಾರ್ಷಿಕ 33 ಮಿಲಿಯನ್ ಟನ್ ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಜಾಮ್ ನಗರ ಸಂಕೀರ್ಣವು, ಭಾರತದ ಒಟ್ಟು ಶುದ್ಧೀಕರಣ ಸಾಮರ್ಥ್ಯದ 12% ನ್ನು ತೈಲ ಶುದ್ಧೀಕರಣವನ್ನು ನಿರ್ವಹಿಸುತ್ತಿದೆ. ಅಲ್ಲದೆ ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳ ಪ್ರಮುಖ ರಫ್ತುದಾರನಾಗಿದೆ. ಭಾರತದ ಆರ್ಥಿಕತೆಯ ಮೇಲೆ ದಾಳಿ ಮಾಡಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್ ಈ ಘಟಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.







