ರಾಜಸ್ಥಾನದ ಅಂತರರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ನಿಂದ ಪಾಕಿಸ್ತಾನದ ರೇಂಜರ್ ಬಂಧನ; ವರದಿ

PC : NDTV
ಹೊಸದಿಲ್ಲಿ: ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ರೇಂಜರ್ ಒಬ್ಬನನ್ನು ಬಿಎಸ್ಎಫ್ ಬಂಧಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಗಡಿ ಭದ್ರತಾ ಪಡೆ ಜವಾನರೊಬ್ಬರನ್ನು ಪಾಕಿಸ್ತಾನದ ರೇಂಜರ್ಗಳು ಬಂಧಿಸಿದ ಸುಮಾರು ಹದಿನೈದು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು.
ಪಾಕಿಸ್ತಾನದ ರೇಂಜರ್ ಅನ್ನು ರಾಜಸ್ಥಾನ ಗಡಿಯಲ್ಲಿ ಪಡೆಯ ವಶಕ್ಕೆ ಪಡೆಯಲಾಗಿದೆ ಎಂದು ಬಿ ಎಸ್ ಎಫ್ ತಿಳಿಸಿದೆ.
Next Story





