3 ತಿಂಗಳ ಜೈಲುವಾಸದ ಬಳಿಕ ಬಿಡುಗಡೆಯಾದ ಫೆಲೆಸ್ತೀನ್ ಬೆಂಬಲಿಗ ಖಲೀಲ್ ಗೆ ನ್ಯೂಜೆರ್ಸಿಯಲ್ಲಿ ಭವ್ಯ ಸ್ವಾಗತ

ಮಹಮೂದ್ ಖಲೀಲ್ | PC : NDTV
ನೆವಾರ್ಕ್: ಫೆಲೆಸ್ತೀನ್ ಪರ ನಿಲುವಿಗಾಗಿ ಅಮೆರಿಕದಲ್ಲಿ ಮೂರು ತಿಂಗಳು ಜೈಲುವಾಸ ಅನುಭವಿಸಿದ ಸಾಮಾಜಿಕ ಹೋರಾಟಗಾರ ಮಹಮೂದ್ ಖಲೀಲ್ ಸೋಮವಾರ ಬಿಡುಗಡೆಗೊಂಡಿದ್ದು, ನ್ಯೂಜೆರ್ಸಿಯ ನೆವಾರ್ಕ್ ನಗರಕ್ಕೆ ಆಗಮಿಸಿದ ಅವರಿಗೆ ಭರ್ಜರಿ ಸ್ವಾಗತ ದೊರೆಯಿತು. ತಾನು ಜೈಲಿನಲ್ಲಿದ್ದಾಗ ಜನಿಸಿದ ಗಂಡು ಮಗುವಿನೊಂದಿಗೆ ನೆವಾರ್ಕ್ ಅಂತಾರಾಷ್ಟ್ರೀಯ ವಿಮಾನದಲ್ಲಿ ಬಂದಿಳಿದ ಖಲೀಲ್ ಅವರನ್ನು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಬೆಂಬಲಿಗರು, ಫೆಲೆಸ್ತೀನ್ ಪರ ಹೋರಾಟಗಾರರು ಸ್ವಾಗತಿಸಿದರು.
ಖಾಲಿಲ್ ಜೊತೆಗೆ ಅಮೆರಿಕದ ಸೆನೆಟ್ ಪ್ರತಿನಿಧಿ ಅಲೆಕ್ಸಾಂಡ್ರಿಯಾ ಒಕಾಸಿಯೊ ಕೋರ್ಟೆಝ್ ಕೂಡಾ ಇದ್ದರು. ಲೂಸಿಯಾನಾ ರಾಜ್ಯದಲ್ಲಿರುವ ಫೆಡರಲ್ ವಲಸಿಗರ ಬಂಧನ ಕೇಂದ್ರದಲ್ಲಿ ಅವರನ್ನು ಇರಿಸಲಾಗಿತ್ತು. ಕೊಲಂಬಿಯಾ ವಿಶ್ವವಿದ್ಯಾನಿಲಯದ ಪದವೀಧರರಾದ ಖಲೀಲ್ ಅವರು ವಿವಿ ಕ್ಯಾಂಪಸ್ ಗಳಲ್ಲಿ ಮುಕ್ತ ಭಾಷಣಗಳಿಗೆ ನಿರ್ಬಂಧಿಸುವ ಟ್ರಂಪ್ ಆದೇಶದ ವಿರುದ್ಧ ನಡೆದ ಹೋರಾಟದ ಮುಂಚೂಣಿಯಲ್ಲಿದ್ದರು.
ನೆವಾರ್ಕ್ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾಲಿಲಿ ಅವರು, ಗಾಝಾ ಯುದ್ಧದಲ್ಲಿ ತನ್ನ ಇಸ್ರೇಲ್ ವಿರೋಧಿ ನಿಲುವನ್ನು ಮುಂದುವರಿಸುವುದಾಗಿ ತಿಳಿಸಿದರು. ಗಾಝಾದಲ್ಲಿ ನಡೆಯುತ್ತಿರು ಜನಾಂಗೀಯ ನರಮೇಧಕ್ಕೆ ಅಮೆರಿಕವು ಸರಕಾರವ ಆರ್ಥಿಕ ನೆರವು ನೀಡುತ್ತಿದೆಯೆಂದು ಅವರು ಆಪಾದಿಸಿದರು. ಒಂದು ವೇಳೆ ಅವರು (ಆಡಳಿತ) ನನ್ನನ್ನು ಕೊಂದರೂ, ನಾನು ಫೆಲೆಸ್ತೀನ್ ಗಾಗಿ ಹೋರಾಡುವೆ ಎಂದು ಹೇಳಿದರು.
ಮೂಲತಃ ಅಲ್ಜೀರಿಯ ಪ್ರಜೆಯಾದ ಖಲೀಲಿ ಅವರನ್ನು ಅಮೆರಿಕದ ವಲಸೆ ಅಧಿಕಾರಿಗಳು ಮಾರ್ಚ್ 8ರಂದು ಕೊಂಲಂಬಿಯಾದಲ್ಲಿರುವ ವಸತಿಗೃಹವೊಂದರಲ್ಲಿ ಮಾರ್ಚ್ 8ರಂದು ವಾರಟ್ ಇಲ್ಲದೆಯೇ ಬಂಧಿಸಿದ್ದರು. ಖಲೀಲಿ ಅವರು ಗ್ರೀನ್ಕಾರ್ಡ್ ಹೊಂದಿರುವ ಅಮೆರಿಕದ ಖಾಯಂ ನಿವಾಸಿಯಾಗಿದ್ದಾರೆ. ಯಾವುದೇ ಸಂಘರ್ಷದಲ್ಲಿ ಶಾಮೀಲಾಗದಿದ್ದರೂ ಕಾನೂನುಬದ್ಧವಾಗಿ ವಾಸ್ತವ್ಯದ ಹಕ್ಕುಗಳನ್ನು ಹೊಂದಿರುವ ಖಲೀಲಿ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ನ್ಯಾಯಾಲಯವು ಅವರ ಬಿಡುಗಡೆಗೆ ಆದೇಶಿಸಿತ್ತು.







