ಸಂಸತ್ತಿನ ಬಜೆಟ್ ಅಧಿವೇಶನ| ಭಾಷಣದಲ್ಲಿ VB-G RAM G ಬಗ್ಗೆ ಉಲ್ಲೇಖಿಸಿದ ರಾಷ್ಟ್ರಪತಿ, ವಿಪಕ್ಷಗಳಿಂದ ಗದ್ದಲ

ರಾಷ್ಟ್ರಪತಿ ದ್ರೌಪದಿ ಮುರ್ಮು (Screengrab:X/ANI)
ಹೊಸದಿಲ್ಲಿ: ಸಂಸತ್ತಿನ ಬಜೆಟ್ ಅಧಿವೇಶನ ಬುಧವಾರ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಸದನವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ವಿಬಿ ಜಿ ರಾಮ್ ಜಿ ಮಸೂದೆಯನ್ನು ಪ್ರಸ್ತಾಪಿಸುತ್ತಿದ್ದಂತೆ ಸಂಸತ್ತಿನಲ್ಲಿ ಭಾರಿ ಗದ್ದಲ ಏರ್ಪಟ್ಟಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಹಾಗೂ ಅಭಿವೃದ್ಧಿಗಾಗಿ ‘ವಿಬಿ ಜಿ ರಾಂ ಜಿ’ ಕಾನೂನನ್ನು ಜಾರಿಗೆ ತರಲಾಗಿದೆ. ಈ ಹೊಸ ಕಾನೂನು ಗ್ರಾಮಗಳಲ್ಲಿ 125 ದಿನಗಳ ಖಚಿತ ಉದ್ಯೋಗವನ್ನು ಖಾತ್ರಿಪಡಿಸುತ್ತದೆ. ಜೊತೆಗೆ, ಭ್ರಷ್ಟಾಚಾರ ಮತ್ತು ಹಣ ಸೋರಿಕೆಗಳನ್ನು ತಡೆಯುತ್ತದೆ, ಈ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ. ರೈತರು, ಪಶುಸಂಗೋಪಕರು ಹಾಗೂ ಮೀನುಗಾರರಿಗೆ ಹೊಸ ಸೌಲಭ್ಯಗಳನ್ನು ಒದಗಿಸಲಿದೆ ಎಂದು ರಾಷ್ಟ್ರಪತಿ ಮುರ್ಮು ಹೇಳಿದರು.
ರಾಷ್ಟ್ರಪತಿಗಳ ಭಾಷಣದ ವೇಳೆ ವಿಬಿ-ಜಿ ರಾಮ್ ಜಿ ಗೆ ವಿರೋಧವನ್ನು ವ್ಯಕ್ತಪಡಿಸಿ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಗದ್ದಲವನ್ನು ಸೃಷ್ಟಿಸಿದೆ.
Next Story





