ಗುಜರಾತ್ | ಅತಿಕ್ರಮಣದ ಆರೋಪದಲ್ಲಿ ಮದರಸಾದ ಒಂದು ಭಾಗ ಕೆಡವಿದ ಅಧಿಕಾರಿಗಳು

Photo credit: PTI
ಭಾವನಗರ : ಗುಜರಾತ್ನ ಭಾವನಗರ ಮುನ್ಸಿಪಲ್ ಕಾರ್ಪೊರೇಷನ್ ಅಕ್ವಾಡಾ ಪ್ರದೇಶದಲ್ಲಿ ಅತಿಕ್ರಮಣದ ಆರೋಪದಲ್ಲಿ ಮದರಸಾದ ಒಂದು ಭಾಗವನ್ನು ಕೆಡವಿರುವ ಬಗ್ಗೆ ವರದಿಯಾಗಿದೆ.
ನಗರ ಯೋಜನೆಯಡಿ ನಿರ್ಮಿಸಿದ ರಸ್ತೆಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಮದರಸಾದ ಒಂದು ಭಾಗವನ್ನು ಕೆಡವಲಾಗಿದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಬಿಎಂಸಿ ತೆರವು ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಭಾವನಗರ ಮುನ್ಸಿಪಲ್ ಕಮಿಷನರ್ ನರೇಂದರ್ ಕುಮಾರ್ ಮೀನಾ, ಮದರಸಾದ ಕೆಲವು ಭಾಗವು ರಸ್ತೆಗೆ ಅಡ್ಡಿಯಾಗುತ್ತಿದೆ. ಎರಡು ವರ್ಷಗಳ ಹಿಂದೆ ಕಟ್ಟಡದ ಭಾಗವನ್ನು ತೆರವು ಮಾಡುವ ಕುರಿತು ಅಂತಿಮ ಆದೇಶವನ್ನು ನೀಡಲಾಗಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರಲಿಲ್ಲ. ಇದರಿಂದ ಮದರಸಾದ ಆವರಣ ಗೋಡೆ ಮತ್ತು ಕೆಲವು ವಸತಿ ಭಾಗಗಳನ್ನು ಕೆಡವಲಾಗಿದೆ ಎಂದು ಹೇಳಿದ್ದಾರೆ.
Next Story





