ಜನರು ಹಣದುಬ್ಬರ, ನಿರುದ್ಯೋಗದ ಬಗ್ಗೆ ಚಿಂತಿತರಾಗಿದ್ದಾರೆ: ಜೈರಾಮ್ ರಮೇಶ್
Congress leader Jairam Ramesh. (PTI Photo/Manvender Vashist Lav)
ಹೊಸದಿಲ್ಲಿ: ಭಾರತದಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು ಹೆಚ್ಚುತ್ತಿರುವ ಹಣದುಬ್ಬರ, ಆರ್ಥಿಕ ಹಿಂಜರಿತ, ನಿರುದ್ಯೋಗ ಹಾಗೂ ಸಂಘರ್ಷದ ಕುರಿತ ಚಿಂತಿತರಾಗಿದ್ದಾರೆ. ಆದರೆ ಮೋದಿ ಸರಕಾರ ದೇಶದ ಗಮನವನ್ನು ಬೇರೆಡೆಗೆ ಸೆಳೆಯುವುದರಲ್ಲಿ ಬ್ಯುಸಿಯಾಗಿದೆ ಎಂದು ಕಾಂಗ್ರೆಸ್ ಶನಿವಾರ ಪ್ರತಿಪಾದಿಸಿದೆ.
ಕಳೆದ ಒಂದು ವರ್ಷ ತರಕಾರಿ ಬೆಲೆ ಶೇ. 15ರಿಂದ 60ಕ್ಕೆ ಏರಿಕೆಯಾಗಿದೆ ಎಂದು ಪ್ರತಿಪಾದಿಸುವ ಮಾದ್ಯಮ ವರದಿಯನ್ನು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ಹಿಂದಿಯ ಪೋಸ್ಟ್ನಲ್ಲಿ ಜೈರಾಮ್ ರಮೇಶ್ ಅವರು, ಈ ವರ್ಷ ಮೂವರ ಭಾರತೀಯರಲ್ಲಿ ಒಬ್ಬರು ತಮ್ಮ ಉದ್ಯೋಗ ಕಳೆದುಕೊಳ್ಳುವ ಹಾಗೂ ಶೇ. 57 ಮಂದಿ ಹಣದುಬ್ಬರದ ಕುರಿತು ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ.
‘‘ಭಾರತದ ಪ್ರತಿ ಇಬ್ಬರಲ್ಲಿ ಒಬ್ಬರು ಅನ್ಯಾಯ ಕಾಲದಲ್ಲಿ ಬಳಲುತ್ತಿದ್ದಾರೆ. ಆದರೆ, ಕಾಂಗ್ರೆಸ್ ಜನರಿಗೆ ನ್ಯಾಯ ಒದಗಿಸಲು ಹೋರಾಟ ಮುಂದುವರಿಸಲಿದೆ’’ ಎಂದು ಅವರು ಪ್ರತಿಪಾದಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ರವಿವಾರ ಅಪರಾಹ್ನ ಜಲ್ಪಾಯ್ಗುರಿ ಪ್ರವೇಶಿಸಲಿದೆ ಎಂದು ಅವರು ತಿಳಿಸಿದ್ದಾರೆ.