ಪಿಎಂ ಕಿಸಾನ್ ಯೋಜನೆ | ನ.19ರಂದು 2,000 ರೂ.ಗಳ 21ನೇ ಕಂತು ಬಿಡುಗಡೆ

Photo Credit : NDTV
ಹೊಸದಿಲ್ಲಿ,ನ.18: ಪ್ರಧಾನಿ ನರೇಂದ್ರ ಮೋದಿಯವರು ನ.19ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಿಎಂ ಕಿಸಾನ್ ಯೋಜನೆಯ 21ನೇ ಕಂತನ್ನು ಬಿಡುಗಡೆಗೊಳಿಸಲಿದ್ದಾರೆ.
ಅರ್ಹ ರೈತರು ನೇರ ಲಾಭ ವರ್ಗಾವಣೆಯ(ಡಿಬಿಟಿ) ಮೂಲಕ ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ 2,000 ರೂ.ಗಳನ್ನು ಸ್ವೀಕರಿಸಲಿದ್ದಾರೆ.
ಕಂತು ಬಿಡುಗಡೆಗೆ ಮುನ್ನ ಸರಕಾರವು ಎಲ್ಲ ಪಿಎಂ ಕಿಸಾನ್-ನೋಂದಾಯಿತ ರೈತರಿಗೆ ಇ-ಕೆವೈಸಿ ಕಡ್ಡಾಯ ಎಂದು ಮತ್ತೊಮ್ಮೆ ಒತ್ತಿ ಹೇಳಿದೆ.
ರೈತರು ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಒಟಿಪಿ ಆಧಾರಿತ ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು ಮತ್ತು ಬಯೊಮೆಟ್ರಿಕ್ ಇ-ಕೆವೈಸಿಯನ್ನು ಸಮೀಪದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಮಾಡಿಸಬಹುದು.
Next Story





