ಪ್ರಧಾನಿ ಮೋದಿಯ 3 ದೇಶಗಳ ಯುರೋಪ್ ಪ್ರವಾಸ ರದ್ದು

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ತನ್ನ ಮೂರು ಯುರೋಪ್ ದೇಶಗಳ ಪ್ರವಾಸವನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಪ್ರಧಾನಿ ಮೋದಿ ಮೇ 13ರಿಂದ 17ರವರೆಗೆ ಕ್ರೊಯೇಶಿಯ, ನಾರ್ವೆ ಮತ್ತು ನೆದರ್ಲ್ಯಾಂಡ್ಸ್ ದೇಶಗಳಿಗೆ ಪ್ರವಾಸ ಹೋಗುವುದು ನಿಗದಿಯಾಗಿತ್ತು. ಅವರು ನಾರ್ವೆಯಲ್ಲಿ ನಾರ್ಡಿಕ್ ಶೃಂಗಸಮ್ಮೇಳನದಲ್ಲಿ ಭಾಗವಹಿಸಬೇಕಾಗಿತ್ತು.
ಅವರ ಪ್ರವಾಸ ರದ್ದತಿಯ ಬಗ್ಗೆ ಈ ದೇಶಗಳಿಗೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
Next Story





