ಭಾರತ-ಯುರೋಪಿಯನ್ ಒಕ್ಕೂಟ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಘೋಷಿಸಿದ ಪ್ರಧಾನಿ ಮೋದಿ

Photo credit: PTI
ಹೊಸದಿಲ್ಲಿ: ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ ಸೇರಿದಂತೆ ಭಾರತ-ಯುರೋಪಿಯನ್ ಯೂನಿಯನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಭಾರತ-ಯುರೋಪಿಯನ್ ಯೂನಿಯನ್ ಶೃಂಗಸಭೆಯಲ್ಲಿ ಈ ಮಹತ್ವದ ಒಪ್ಪಂದವನ್ನು ಮಾಡಲಾಗಿದೆ.
“ಭಾರತ ಮತ್ತು ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದವನ್ನು(FTA) ತಲುಪಿವೆ. ಇದು ಜಾಗತಿಕ GDP ಯ 25% ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಹೊಂದಿದೆ. ಈ ಒಪ್ಪಂದವು 140 ಕೋಟಿ ಭಾರತೀಯರು ಮತ್ತು ಕೋಟ್ಯಂತರ ಯುರೋಪಿಯನ್ನರಿಗೆ ಸಾಕಷ್ಟು ಅವಕಾಶಗಳನ್ನು ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Next Story





