ಏಷ್ಯಾಕಪ್ ಜಯವನ್ನು ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಹೋಲಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಏಷ್ಯಾಕಪ್ ಗೆದ್ದ ಭಾರತ ತಂಡವನ್ನು ಹಾರ್ದಿಕವಾಗಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ ತಂಡದ ಸಾಧನೆಯನ್ನು ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಹೋಲಿಸಿದ್ದಾರೆ. "ಫಲಿತಾಂಶ ಅದೇ ಆಗಿದೆ; ಭಾರತ ಗೆದ್ದಿದೆ" ಎಂದು ಬಣ್ಣಿಸಿದ್ದಾರೆ.
"ಮೈದಾನದಲ್ಲಿ ಆಪರೇಷನ್ ಸಿಂಧೂರ. ಫಲಿತಾಂಶ ಅದೇ- ಭಾರತದ ಗೆಲುವು! ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು" ಎಂದು ಎಕ್ಸ್ ಪೋಸ್ಟ್ ನಲ್ಲಿ ಮೋದಿ ಹೇಳಿದ್ದಾರೆ.
ನಾಟಕೀಯ ಫೈನಲ್ ನಲ್ಲಿ ಭಾರತದ ಕೆಳಮಧ್ಯಮ ಕ್ರಮಾಂಕದ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಸ್ಮರಣೀಯ ಗೆಲುವು ತಂದುಕೊಟ್ಟರು.
ಭಾರತ ಕಳೆದ ಮೇ ತಿಂಗಳಲ್ಲಿ ಪಾಕಿಸ್ತಾನದ ಉಗ್ರರ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಏಷ್ಯಾದ ಬದ್ಧ ಪ್ರತಿಸ್ಪರ್ಧಿಗಳ ನಡುವಿನ ಕ್ರಿಕೆಟ್ ಕಾಳಗ ವಿಶೇಷ ಮಹತ್ವ ಪಡೆದಿತ್ತು. ಸಂಬಂಧ ಹದಗೆಟ್ಟಿರುವ ಸಂದರ್ಭದಲ್ಲಿ ಪಾಕಿಸ್ತಾನದ ಜತೆಗೆ ಭಾರತ ತಂಡ ಆಡುವುದಕ್ಕೆ ಹಲವು ಮಂದಿ ಅಭಿಮಾನಿಗಳು ಹಾಗೂ ವಿರೋಧ ಪಕ್ಷದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.
#OperationSindoor on the games field.
— Narendra Modi (@narendramodi) September 28, 2025
Outcome is the same - India wins!
Congrats to our cricketers.







