ಭಾರತದ ಪ್ರಪ್ರಥಮ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ ‘ನಮೋ ಭಾರತ್’ ಉದ್ಘಾಟಿಸಿದ ಪ್ರಧಾನಿ ಮೋದಿ

Photo: ANI
ಸಾಹಿಬಾಬಾದ್ (ಉತ್ತರ ಪ್ರದೇಶ): ಭಾರತದ ಪ್ರಪ್ರಥಮ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ವ್ಯವಸ್ಥೆಯಾದ ‘ನಮೋ ಭಾರತ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದಲ್ಲಿ ಹಸಿರು ನಿಶಾನೆ ತೋರಿದರು.
ಉತ್ತರ ಪ್ರದೇಶದ ಸಾಹಿಬಾಬಾದ್ ನಿಂದ ದುಹೈ ಡಿಪೊವನ್ನು ಸಂಪರ್ಕಿಸುವ ‘ನಮೊ ಭಾರತ್’ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಇದು ಅಂತರ ನಗರಗಳ ನಡುವೆ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಅತಿ ವೇಗದ ರೈಲುಗಳ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ರೈಲು ಸೇವೆಯನ್ನು ಅಗತ್ಯಕ್ಕನುಗುಣವಾಗಿ ಪ್ರತಿ ಐದು ನಿಮಿಷಕ್ಕೊಮ್ಮೆಯೂ ವಿಸ್ತರಿಸಬಹುದಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ರೈಲು ಸೇವೆಗೆ ಚಾಲನೆ ನೀಡಿದ ನಂತರ ತಾವೂ ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ನರೇಂದ್ರ ಮೋದಿ, ರೈಲಿನಲ್ಲಿ ಕೆಲವು ಶಾಲಾ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.
‘ರ್ಯಾಪಿಡ್ ಎಕ್ಸ್’ ಎಂಬ ಹೆಸರು ಹೊಂದಿದ್ದ ಈ ರೈಲು ಸೇವೆಗೆ ನಿನ್ನೆಯಷ್ಟೇ ‘ನಮೋ ಭಾರತ್’ ಎಂದು ಮರು ನಾಮಕರಣ ಮಾಡಲಾಗಿತ್ತು.
Next Story





