ದಟ್ಟ ಮಂಜು: ಪ್ರಧಾನಿ ಮೋದಿ ಹೆಲಿಕಾಪ್ಟರ್ ಇಳಿಯಲು ಅಡಚಣೆ

ಸಾಂದರ್ಭಿಕ ಚಿತ್ರ | Photo Credit : PTI
ಕೋಲ್ಕತಾ, ಡಿ. 20: ಪಶ್ಚಿಮಬಂಗಾಳದ ತಾಹೆರ್ಪುರ ಹೆಲಿಪ್ಯಾಡ್ನಲ್ಲಿ ದಟ್ಟ ಮಂಜಿನಿಂದ ಕಡಿಮೆ ದೃಗ್ಗೋರತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಶನಿವಾರ ಇಳಿಯಲು ವಿಫಲವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಯು-ಟರ್ನ್ ತೆಗೆದುಕೊಳ್ಳುವುದಕ್ಕಿಂತ ಹಾಗೂ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಹಿಂದಿರುಗುವ ಮೊದಲು ಹೆಲಿಪ್ಯಾಡ್ ಇದ್ದ ಮೈದಾನದ ಮೇಲೆ ಸ್ಪಲ್ಪ ಹೊತ್ತು ಹಾರಾಡಿತು.
ಇದಕ್ಕೂ ಮುನ್ನ ಪ್ರಧಾನಿ ಬೆಳಗ್ಗೆ ಸುಮಾರು 10.40ಕ್ಕೆ ಕೋಲ್ಕತ್ತಾಕ್ಕೆ ಆಗಮಿಸಿದರು. ಅನಂತರ ಅವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ನಾಡಿಯಾ ಜಿಲ್ಲೆಯ ತಾಹೆರ್ಪುರಕ್ಕೆ ತೆರಳಿದರು. ಅವರು ಅಲ್ಲಿ ಆಡಳಿತಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು ಹಾಗೂ ರಾಜ್ಯದ ಹೆದ್ದಾರಿ ಯೋಜನೆಯನ್ನು ಉದ್ಘಾಟಿಸಬೇಕಿತ್ತು.
ಅನಂತರ ಅವರು ಬಿಜೆಪಿಯ ರಾಜಕೀಯ ‘ರ್ಯಾಲಿ ಪರಿವರ್ತನಾ ಸಂಕಲ್ಪ ಸಭಾ’ದಲ್ಲಿ ಭಾಗವಹಿಸಿ ಮಾತನಾಡಬೇಕಿತ್ತು.
Next Story





