'ಮತದಾರರ ಅಧಿಕಾರ ಯಾತ್ರೆ'ಯ ವೇಳೆ ಪ್ರಧಾನಿ ಮೋದಿಗೆ ನಿಂದನೆ: ಆರೋಪಿಯನ್ನು ಬಂಧಿಸಿದ ಬಿಹಾರ ಪೊಲೀಸರು

ಸಾಂದರ್ಭಿಕ ಚಿತ್ರ
ದರ್ಭಾಂಗ: ಬಿಹಾರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಮತದಾರರ ಅಧಿಕಾರ ಯಾತ್ರೆ'ಯ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಅಶ್ಲೀಲವಾಗಿ ನಿಂದಿಸಿದ ವ್ಯಕ್ತಿಯೊಬ್ಬನನ್ನು ಶುಕ್ರವಾರ ಬಿಹಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಮುಹಮ್ಮದ್ ರಿಝ್ವಿ ಅಲಿಯಾಸ್ ರಾಝಾ (20) ಎಂದು ಗುರುತಿಸಲಾಗಿದ್ದು, ಆತನನ್ನು ದರ್ಭಾಂಗ ಪಟ್ಟಣದ ಸಿಂಘ್ವಾರ ಪ್ರದೇಶದಿಂದ ಬಂಧಿಸಲಾಗಿದೆ.
ದರ್ಭಾಂಗ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಆದಿತ್ಯ ನಾರಾಯಣ್ ಚೌಧರಿ ನೀಡಿರುವ ದೂರನ್ನು ಆಧರಿಸಿ, ಆರೋಪಿ ರಾಝಾ ಹಾಗೂ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿದೆ.
ದರ್ಭಾಂಗ್ ಪಟ್ಟಣದಲ್ಲಿ ಅಧಿಕಾರ ಯಾತ್ರೆಯ ಸಮಯದಲ್ಲಿ ಓರ್ವ ವ್ಯಕ್ತಿ ಹಿಂದಿ ಭಾಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
Next Story





