ಓಣಂ ಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಓಣಂ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು , "ಎಲ್ಲರಿಗೂ ಓಣಂ ಶುಭಾಶಯಗಳು! ನಿಮ್ಮ ಜೀವನವು ಉತ್ತಮ ಆರೋಗ್ಯ, ಅಪ್ರತಿಮ ಸಂತೋಷ ಹಾಗೂ ಅಪಾರ ಸಮೃದ್ಧಿಯಿಂದ ಕೂಡಿರಲಿ. ಕಳೆದ ಹಲವು ವರ್ಷಗಳಿಂದ ಓಣಂ ಜಾಗತಿಕ ಹಬ್ಬವಾಗಿದೆ ಹಾಗೂ ಇದು ಕೇರಳದ ರೋಮಾಂಚಕ ಸಂಸ್ಕೃತಿಯನ್ನು ಸುಂದರವಾಗಿ ಪ್ರದರ್ಶಿಸುತ್ತದೆ'' ಎಂದು ಪ್ರಧಾನಿ ಮೋದಿ ಹೇಳಿದರು.
Next Story





